ತುಮಕೂರು:

      ಹಿರಿಯ ಕ್ರೀಡಾಪಟುಗಳಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಮಾರ್ಚ್ 13 ಮತ್ತು 14 ರಂದು ಬೆಂಗಳೂರಿನ ಯಲಹಂಕ ಕ್ರೀಡಾಂಗಣದಲ್ಲಿ 2 ದಿನಗಳ ರಾಜ್ಯಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ತುಮಕೂರು ಜಿಲ್ಲೆಯಿಂದ ಭಾಗವಹಿಸುವ ಹಿರಿಯ ಕ್ರೀಡಾಪಟುಗಳು ಮಾರ್ಚ್ 07ರೊಳಗೆ ಹೆಸರು ನೊಂದಾಯಿಸಲು ಎಂದು ಮಾಸ್ಟರ್ ಗೇಮ್ಸ್ ಅಸೋಸಿಯೇಷನ್‍ನ ತುಮಕೂರು ಜಿಲ್ಲಾಧ್ಯಕ್ಷ ಧನಿಯಕುಮಾರ್ ಮನವಿ ಮಾಡಿದ್ದಾರೆ.

      ನಗರದ ಸಿ.ಎಸ್.ಐ ಲೇಔಟ್‍ನಲ್ಲಿರುವ ಅಸೋಸಿಯೇಷನ್ ಕಚೇರಿಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ತುಮಕೂರು ತಂಡಕ್ಕೆ ಹೆಸರು ನೊಂದಾಯಿಸುವ ಸಂಬಂಧ ಕರೆದಿದ್ದ ಪೂರ್ವಬಾವಿ ಸಭೆಯಲ್ಲಿ ಮಾಸ್ಟರ್ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು,ತುಮಕೂರು ಮಾಸ್ಟರ್ ಗೇಮ್ಸ್ ಅಸೋಸಿಯೇಷನ್(ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ(ರಿ)ನ ಮಾನ್ಯತೆ ಪಡೆದಿದ್ದು,ಮಾರ್ಚ್ 7 ರವರೆಗೆ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ ಎಂದರು.

       ಕ್ರೀಡಾಕೂಟವನ್ನು ಕರ್ನಾಟಕ ರಾಜ್ಯ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ,ದ್ರಾವಿಡ್ ಪಡುಕೋಣೆ ಅಕಾಡೆಮಿ ,ಜಯಪ್ರಕಾಶ್ ನಾರಾಯಣ ಯುತ್ ಸೆಂಟರ್,ವಿದ್ಯಾನಗರ ಹಾಗೂ ಡಿ ಕ್ಯೂಬ್ ಸ್ಪೋಟ್ರ್ಸ್ ಕ್ಲಬ್,ಯಲಹಂಕ ಇವರ ಸಹಯೋಗದಲ್ಲಿ ಆಯೋಜಿಸಲಾಗುತ್ತಿದ್ದು,30 ರಿಂದ 90 ವರ್ಷ ವಯಸ್ಸಿನ ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ ಎಂದು ಧನಿಯಕುಮಾರ್ ತಿಳಿಸಿದರು.

      ಮಾಸ್ಟರ್ ಗೇಮ್ಸ್ ಆಸೋಸಿಯೇಷನ್ ತುಮಕೂರು ಇದರ ಉಪಾಧ್ಯಕ್ಷ ರಾಜೇಶ್ ಹಿರೇಮಠ್ ಮಾತನಾಡಿ,ಮಾಸ್ಟರ್ ಕ್ರೀಡಾಕೂಟದಲ್ಲಿ ಐದೈದು ವರ್ಷಗಳ ಅಂತರದ ಲ್ಲಿ(30-35,35-40,40-45,45-50,50-55,55-60,60-65,65-70,70-75,75-80,80,85,85-90)ಕ್ರೀಡೆಗಳನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರಿ ಗಾಗಿ ಅಥ್ಲೆಟಿಕ್ಸ್, ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಫುಟ್ಬಾಲ್, ಹ್ಯಾಂಡ್‍ಬಾಲ್, ಬ್ಯಾಸ್ಕೆಟ್‍ಬಾಲ್, ಟೆನ್ನಿಸ್, ಟೆಬಲ್ ಟೆನ್ನಿಸ್,ಕಬ್ಬಡಿ, ಈಜು, ವೇಟ್‍ಲಿಫ್ಟಿಂಗ್ ಮತ್ತು ಕುಸ್ತಿ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಮಾರ್ಚ್ 7 ನೇ ತಾರೀಖು ಒಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

      ರಾಜ್ಯಮಟ್ಟದ ಈ ಕ್ರೀಡಾಕೂಟದಲ್ಲಿ ವಿಜೇತರಾದವರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ತಿತಿತಿ.mಚಿsಣeಡಿsgಚಿmesಞಚಿಡಿಟಿಚಿಣಚಿಞಚಿ.ಛಿom ಮೊ:9343731772 ಹಾಗೂ 8660161978 ಸಂಪರ್ಕಿಸಬಹುದಾಗಿದೆ ಎಂದು ವಿವರ ನೀಡಿದರು.

      ಸಭೆಯಲ್ಲಿ ತುಮಕೂರು ಮಾಸ್ಟರ್ ಗೇಮ್ಸ್ ಅಸೋಸಿಯೇಷನ್‍ನ ಕಾರ್ಯದರ್ಶಿ ಚೇತನ್ ಜಿ.ಬಿ.ಉಪಸ್ಥಿತರಿದ್ದರು.

(Visited 15 times, 1 visits today)