ತುಮಕೂರು:

      ಜಿಲ್ಲೆಯಲ್ಲಿನ ಶೈಕ್ಷಣಿಕ ಸಂಸ್ಥೆಗಳು ಹಾಗು ಸರ್ಕಾರಿ ಕಛೇರಿಗಳನ್ನು ತಂಬಾಕು ಮುಕ್ತಮಾಡುವುದರ ಮೂಲಕ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ವೈ.ಎಸ್. ಪಾಟೀಲ ಅವರು ತಿಳಿಸಿದರು.

     ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ (ಕೋಟ್ಪಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಲಾ ಕಾಲೇಜುಗಳ 100 ಗಜಗಳ ಅಂತರದಲ್ಲಿ ತಂಬಾಕು ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಮಕ್ಕಳು ತಂಬಾಕು ಮುಕ್ತ ಸ್ವಸ್ಥ್ಯ ಜೀವನ ನಡೆಸಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗ್ರಾಮಪಂಚಾಯಿತಿ, ಪಟ್ಟಣಪಂಚಾಯಿತಿ, ನಗರಸಭೆಗಳು, ಪುರಸಭೆಗಳು ಹಾಗೂ ಮಹಾ ನಗರಪಾಲಿಕೆಗಳ ವತಿಯಿಂದ ಅಂತಹ ವರ್ತಕರ ಮೇಲೆ ಕ್ರಮ ತೆಗೆದುಕೊಂಡು, ಉಲ್ಲಂಘನೆಯನ್ನು ಪುನರಾವರ್ತನೆ ಮಾಡಿದ್ದಲ್ಲಿ ಉದ್ದಿಮೆ ಪರವಾನಗಿಯನ್ನು ರದ್ದುಮಾಡಬೇಕು ಎಂದರು.

      ನಿಯಮಿತವಾಗಿ ಕೋಟ್ಪಾ ಕಾಯಿದೆಯ ಕಾರ್ಯಾಚರಣೆಯನ್ನು ನಡೆಸಬೇಕು. ಜಿಲ್ಲೆಯಲ್ಲಿನ ಪ್ರತೀ ಶೈಕ್ಷಣಿಕ ಸಂಸ್ಥೆಯನ್ನು ತಂಬಾಕುಮುಕ್ತ ಮಾಡಬೇಕಾಗಿದೆ ಎಂದು ತಿಳಿಸಿದರು. ತಂಬಾಕು ಉತ್ಪನ್ನಗಳ ಕುರಿತಾದ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತುಗಳು ಹಾಗು ಎಚ್ಚರಿಕೆ ಸಂದೇಶವಿಲ್ಲದ, ವಿದೇಶಿ ಸಿಗರೇಟುಗಳ ಮಾರಾಟದ ಮೇಲೆ ನಿಗಾವಹಿಸಿ, ಉಲ್ಲಂಘನೆಗಳಿಗೆ ಎಫ್.ಐ.ಆರ್. ದಾಖಲಿಸುವಂತೆ ಪೋಲೀಸ್ ಇಲಾಖೆಗೆ ಸೂಚನೆ ನೀಡಿದರು.

       ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ ಜಿಲ್ಲೆಯಲ್ಲಿನ ಬಸ್ ನಿಲ್ದಾಣಗಳಲ್ಲಿ ಕಂಡ ಕಂಡಲ್ಲಿ ಉಗುಳುತ್ತಿದ್ದು, ಇದು ಅನಾರೋಗ್ಯಕರ ಹಾಗೂ ಅಸಹ್ಯಕರ ಅಭ್ಯಾಸವಾಗಿದೆ. ತಾಲ್ಲೂಕು ಮಟ್ಟದಲ್ಲಿ ತಿಂಗಳಿಗೆ ಒಂದು ಬಾರಿ ಕೋಟ್ಪಾ ಅನುμÁ್ಠನ ಕಾರ್ಯಾಚರಣೆಯನ್ನು ನಡೆಸಬೇಕು ಹಾಗೂ ಅದರ ಪ್ರಗತಿಪರಿಶೀಲನೆಯನ್ನು ನಡೆಸಬೇಕು, ಇದರಿಂದ ತಂಬಾಕು ಕಾಯಿದೆ ಉಲ್ಲಂಘನೆಯನ್ನು ಕಡಿಮೆ ಮಾಡಬಹುದಾಗಿದೆ. ಎಂದು ಅವರು ಹೇಳಿದರು.

      ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿಗಳು ಹಾಗು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯ ಕ್ರಮಾಧಿಕಾರಿಗಳೂ ಆಗಿರುವ ಡಾ. ಮೋಹನ್ ದಾಸ್ ರವರು ಮಾತನಾಡಿ, ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ ಒಟ್ಟು 104 ಶಾಲೆಗಳಲ್ಲಿ ಒಟ್ಟು 18,222 ಮಕ್ಕಳಿಗೆ ತಂಬಾಕು ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯಿದೆಯ ಕುರಿತು ಅರಿವು ಮೂಡಿಸಲಾಗಿದೆ. ಪ್ರಸ್ತುತ 69 ಅನುμÁ್ಠನ ಕಾರ್ಯಾಚರಣೆಗಳನ್ನು ನಡೆಸಿ ಒಟ್ಟು 1699 ಪ್ರಕರಣಗಳಲ್ಲಿ ರೂ.1,71,070 ದಂಡವನ್ನು ವಿಧಿಸಲಾಗಿದೆ. 1815 ತಂಬಾಕು ವ್ಯಸನಿಗಳಿಗೆ ಆಪ್ತಸಮಾಲೋಚನೆ ನಡೆಸಿ ಚಿಕಿತ್ಸೆನೀಡಲಾಗಿದೆ ಎಂದು ತಿಳಿಸಿದರು.

      ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಸುರೇಶ್ ಬಾಬು, ಪೋಲೀಸ್, ಶಿಕ್ಷಣ, ಕೆ.ಎಸ್.ಆರ್.ಟಿ.ಸಿ., ಅಬಕಾರಿ, ಅಗ್ನಿಶಾಮಕ, ತೋಟಗಾರಿಕೆ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಸೇರಿದಂತೆ. ಐ.ಪಿ.ಹೆಚ್., ಬೆಂಗಳೂರು ಸಂಸ್ಥೆಯ ಸಿಬ್ಬಂದಿಗಳು, ವಿವಿಧ ತಾಲ್ಲೂಕುಗಳ ವೈದ್ಯಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು, ಹಾಜರಿದ್ದರು.

(Visited 53 times, 1 visits today)
FacebookTwitterInstagramFacebook MessengerEmailSMSTelegramWhatsapp