ಹುಳಿಯಾರು:
ಇಲ್ಲಿನ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳು, ವೃದ್ದರು, ಜನರು ಭಯದಿಂದ ಸಂಚರಿಸುವಂತಾಗಿದೆ. ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಹುಳಿಯಾರು ಪಟ್ಟಣದಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಹಾವಳಿಯಿಂದ ಜನರನ್ನ ರಕ್ಷಿಸುವಂತೆ ಈಗಾಗಲೇ ಸ್ಥಳೀಯ ನಿವಾಸಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಮಾಡಿದರು. ಯಾವುದೇ ಪ್ರಯೋಜನವಾಗಿಲ್ಲಾ.
ಪಟ್ಟಣದ 12ನೇ ವಾರ್ಡ್ ಮಾರುತಿ ನಗರದಲ್ಲಿ 10 ವರ್ಷದ ಬಾಲಕಿ ಶರ್ಮಿತಾಗೆ ಬೀದಿ ನಾಯಿ ಕಡಿತಕ್ಕೆ ತುತ್ತಾಗಿದ್ದಾರೆ. ಹಾಗೂ ಬಾಬಣ್ಣ ಎಂಬುವರಿಗೆ ಸೇರಿದಂತೆ ಸಾಕಷ್ಟು ಜನರು ಒಂದೇ ತಿಂಗಳಲ್ಲಿ ನಾಯಿಗಳ ಕಡಿತಕ್ಕೆ ತುತ್ತಾಗಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಇಲ್ಲ:
ಬೀದಿ ನಾಯಿಗಳ ಕಡಿತಕ್ಕೆ ಸಿಲುಕಿದವರು ಚಿಕಿತ್ಸೆಗೆಂದು ಇಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದರೆ ನಾಯಿ ಕಡಿತಕ್ಕೆ ಕೊಡುವ ಔಷಧಿ ದೊರೆಯದೆ ತಾಲೂಕು ಆಸ್ಪತ್ರೆಗೆ ಹೋಗುವಂತ ಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಪಟ್ಟಣದ ಜನರು ಬೀದಿ ನಾಯಿಗಳ ಹಾವಳಿಯಿಂದ ತತ್ತರಿಸಿದ್ದು ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಹುಳಿಯಾರು ಸರಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತದ ಔಷಧಿ ದೊರೆಯುವಂತ ವ್ಯವಸ್ಥೆ ಕಲ್ಪಿಸುವಂತೆ ಜನ ಪ್ರತಿನಿದಿಗಳಿಗೆ, ಆರೋಗ್ಯಧಿಕಾರಿಗಳಿಗೆ ಮನವಿಮಾಡಿದ್ದಾರೆ.