ತುಮಕೂರು :
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿನ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಡಾ. ಬಿ.ಸಿ.ಶೈಲಾನಾಗರಾಜ್‍ರವರು ತಮ್ಮ ಅಪಾರ ಸ್ನೇಹಿತರ ಬಳಗದೊಂದಿಗೆ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ಮಾದ್ಯಮದೊಂದಿಗೆ ಮಾತನಾಡಿದರು.
ತಾವು ನಾಡು, ನುಡಿ ಸೇವೆ ಮಾಡಲು ಈ ಚುನಾವಣೆಗೆ ಸ್ಪರ್ಧಿಸಿದ್ದು, ತಾವು ತುಮಕೂರು ಜಿಲ್ಲೆಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಗಮ್ಯ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರಲ್ಲದೇ, ಇದುವರೆವಿಗೂ 4 ಕವನ ಸಂಕಲನಗಳು, 5 ಮಹಿಳಾ ಅಧ್ಯಯನ ಪುಸ್ತಕಗಳು, 6 ವಿಚಾರ ಕೃತಿಗಳು, 5 ವ್ಯಕ್ತಿ ಚಿತ್ರಗಳನ್ನು ಹೊರತಂದಿದ್ದು, ತಾವು ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಗೆ ವಿವಿಧ 9 ಪ್ರಶಸ್ತಿಗಳು ತಮಗೆ ಲಭಿಸಿರುವುದಾಗಿ ತಿಳಿಸಿದರು. ಅಲ್ಲದೇ ತುಮಕೂರು ತಾಲ್ಲೂಕು & ಹೋಬಳಿ ಮಟ್ಟಡದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಯಶಸ್ವಿಯಾಗಿದ್ದು, ವಿವಿಧ ಮತ್ತು ವಿಶಿಷ್ಠ ಕಾರ್ಯಕ್ರಮಗಳನ್ನು ಆಯೋಜಿಸಿರುವ ಅನುಭವವನ್ನು ಹೊಂದಿರುವುದಾಗಿ ತಿಳಿಸಿದರು.
ಹಲವಾರು ಕವಿಗೋಷ್ಠಿ, ಯುವ ಪ್ರತಿಭೆಗಳನ್ನು ಗುರತಿಸುವಲ್ಲಿ ಭಾಗಿಗಳಾಗಿರುವುದು ಅಲ್ಲದೇ ತಾವು ನಿರಂತರವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು. ಮುಂದಿನ ದಿನಗಳಲ್ಲಿ ತಾವು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಠ ಸೇವೆಯನ್ನು ಸಲ್ಲಿಸಿ, ಸರ್ವತೋಮುಖ ಅಭಿವೃದ್ಧಿ ಶ್ರಮಿಸುವುದಾಗಿ ತಿಳಿಸಿದರು.
ಮುಂದುವರೆದು ಮಾದ್ಯಮಗಳ ಮೂಲಕ ಜಿಲ್ಲೆಯ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಲ್ಲಿ ತಮಗೆ ಮತವನ್ನು ನೀಡುವುದರ ಮೂಲಕ ಜಯಶೀಲಳನ್ನಾಗಿ ಮಾಡಿ, ಕನ್ನಡದ ಸೇವೆಯನ್ನು ಮಾಡಲು ಮತ್ತಷ್ಟು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.