ಶಿರಾ:
ಏ.5ರಂದು ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣಾ ಸರಹದ್ದು ದೊಡ್ಡಗೂಳ ಗ್ರಾಮದಲ್ಲಿ ಕುಮಾರಿ ಕಾವ್ಯ ಬಿನ್ ಪಾಂಡುರಂಗಪ್ಪ ದೊಡ್ಡಗೂಲ ರವರು ಮನೆಯಿಂದ ಶಿರಾ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿ ಆರೋಪಿ ಈರಣ್ಣ ಎಂಬಾತನು ಬೈಕ್ ನಿಲ್ಲಿಸಿ ಕಾಲೇಜಿಗೆ ಹೋಗುತ್ತಿದ್ದ ಕಾವ್ಯಳನ್ನು ದೊಡ್ಡಗೂಳ ಕೆರೆಯ ಪಕ್ಕದಲ್ಲಿರುವ ಮಲ್ಲಯ್ಯರವರ ಬಾಬ್ತು ಸೀಮೆ ಜಾಲಿಗಿಡಗಳು ಬೆಳೆದಿರುವ ಜಮೀನಿಗೆ ಎಳೆದುಕೊಂಡು ಹೋಗಿ ತನ್ನ ಕೈನಲ್ಲಿದ್ದ ಕುಡುಗೋಲಿನಿಂದ ಆಕೆಯ ಮುಖ, ಕತ್ತು ಮತ್ತು ಕೈಗಳನ್ನು ಕೊಚ್ಚಿ ಕೊಲೆ ಮಾಡಿ ಕುಡುಗೋಲಿನ ಸಮೇತ ಓಡಿ ಹೋಗಿದ್ದು ಈ ಸಂಬಂಧ ಕಳ್ಳಬೆಳ್ಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಸದರಿ ಕೊಲೆ ಪ್ರಕರಣದ ಪತ್ತೆಗಾಗಿ ಸಿಪಿಐಶಿರಾ ಗ್ರಾಮಾಂತರ ವೃತ್ತ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಪ್ರಕರಣ ದಾಖಲಾದ 24 ಗಂಟೆಯೊಳಗೆ ಏ.6ರಂದು ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಹಲ್ಲೂರು ಕೆರೆಯ ಅಂಗಳದಲ್ಲಿರುವ ಸೀಮೆ ಜಾಲಿ ಪೊದೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ 25 ವರ್ಷದ ಈರಣ್ಣನನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕುಡುಗೋಲು, ಕೆಎ-06- ಹೆಚ್‍ಜಿ. 1639 ನಂಬರ್‍ನ ಮೋಟಾರ್ ಸೈಕಲನ್ನು ವಶಪಡಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ.
ಸದರಿ ಪ್ರಕರಣದ ಆರೋಪಿ ಮತ್ತು ಕಳವು ಮಾಲನ್ನು ವಶಪಡಿಸಿಕೊಳ್ಲಲು ಶ್ರಮಿಸಿದ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಉದೇಶ್ ಟಿ.ಜೆ, ಕೆಎಸ್‍ಪಿಎಸ್, ಹಾಗೂ ಶಿರಾ ಉಪ ವಿಭಾಗದ ಉಪಾಧೀಕ್ಷರಾದ ಕುಮಾರಪ್ಪ, ಕೆಎಸ್‍ಪಿಎಸ್ ರವರ ಮಾರ್ಗದರ್ಶನದಲ್ಲಿ ರವಿಕುಮಾರ್ ಸಿ, ಸಿಪಿಐ ಶಿರಾ ಗ್ರಾಮಾಂತರ ವೃತ್ತರವರ ನೇತೃತ್ವದಲ್ಲಿ ಪಿಎಸ್‍ಐಗಳಾದ ಸಿ.ಆರ್ ಭಾಸ್ಕರ್, ಪಾಲಾಕ್ಷಪ್ರಬು ಮತ್ತು, ಸಿಬ್ಬಂದಿಗಳಾದ ರೇಣುಕಾ ಕೆ, ಸಿ.ಪಿ ಕಿರಣ್ ಕುಮಾರ್, ಹನುಮಂತರಾಯಪ್ಪ, ಮಹೇಶ್, ಪ್ರಸಾದ್ ಟಿ.ಕೆ, ಬಸವರಾಜು, ಹರೀಶ್ ಕುಮಾರ್, ಸುದರ್ಶನ್, ರಂಗನಾಥ್ ಮತ್ತು ಚಾಲಕರಾದ ಮಂಜುನಾಥ್, ಸಂತೋಶ್ ಕುಮಾರ್ರವರ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಕೆ. ವಂಶಿಕೃಷ್ಣ ಅಭಿನಂದಿಸಿದ್ದಾರೆ.