ಕೊರಟಗೆರೆ:
ಹೋರಾಟ ಮತ್ತು ಸಂಘಟನೆಯಿಂದ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ. ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನಾವೇಲ್ಲರು ಬೆಳೆಸಿ ಕನ್ನಡ ನಾಡಿನ ಭೂಪಟವನ್ನು ವಿಶ್ವದ ಭೂಪಟದಲ್ಲಿ ಕಾಣುವಂತಹ ಪ್ರಯತ್ನ ಮಾಡಬೇಕು ಎಂದು ಸಿವಿಲ್ ನ್ಯಾಯಾಧೀಶ ರಮೇಶ್‍ಬಾಬು ತಿಳಿಸಿದರು.
ಪಟ್ಟಣದ ಜೆಎಂಎಪ್‍ಸಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ 46ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ ಕನ್ನಡ ನಾಡಿನ ಪ್ರತಿಯೊಬ್ಬ ಮನುಷ್ಯನ ಜೀವನದ ಕ್ಷಣದಲ್ಲಿಯೂ ಕನ್ನಡ ಭಾಷೆಯನ್ನು ನೆನೆಯುವಂತಹ ಕೆಲಸ ಮಾಡಬೇಕು. ಬೆಂಗಳೂರು ನಗರದ ಬಹುತೇಕ ಕಡೆ ಮತ್ತು ರಾಜ್ಯದ ಗಡಿಭಾಗಗಳಲ್ಲಿ ಕನ್ನಡ ಭಾಷೆ ಮರೆಯಾಗಿ ಪರಬಾಷೆಯ ಬಳಕೆ ಹೆಚ್ಚಾಗುತ್ತೀದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸರಕಾರಿ ಅಭಿಯೋಜಕ ಷೇಕ್ ಮಹಮ್ಮದ್ ಅಲಿ ಮಾತನಾಡಿ ನಮ್ಮ ಮಾತೃ ಭಾಷೆಯನ್ನು ಗೌರವಿಸಿ ನಮ್ಮ ಸಂಸ್ಕøತಿಯನ್ನು ಕಾಪಾಡುವುದು ನಮ್ಮೇಲ್ಲರ ಪ್ರಮುಖ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯದ ಬೆಳಗಾವಿಯಲ್ಲಿ ಕನ್ನಡ ಭಾಷೆಯ ಬಳಕೆ ಮಾಡುವುದೇ ಕಷ್ಟಕರವಾಗಿದೆ. ನಮ್ಮ ರಾಜ್ಯದಲ್ಲಿ ವೈಧ್ಯಕೀಯ ಮತ್ತು ಕಾನೂನು ಶಿಕ್ಷಣದಲ್ಲಿ ಕನ್ನಡ ಭಾಷೆಯ ಬಳಕೆ ಇನ್ನೂ ಶೂನ್ಯವಾಗಿದೆ ಎಂದು ತಿಳಿಸಿದರು.
ವಕೀಲರಾದ ಜಿ.ಎಂ.ಕೃಷ್ಣಮೂರ್ತಿ ಮಾತನಾಡಿ ನಮ್ಮ ವಕೀಲ ಮಿತ್ರರು ಕನ್ನಡ ಭಾಷೆಯಲ್ಲಿಯೇ ಮಾತನಾಡಿ ಪ್ರಕರಣ ಬಗೆಹರಿಸುವ ಕೆಲಸ ಮಾಡಿ ಕನ್ನಡ ಭಾಷೆಗೆ ಗೌರವ ನೀಡಬೇಕು. ಬೆಂಗಳೂರು ನಗರದ ಬಹುತೇಕ ಕಡೆಯಲ್ಲಿ ತಮಿಳು ಭಾಷೆಯೇ ಹೆಚ್ಚಾಗಿ ಕನ್ನಡ ಭಾಷೆ ಮರೆ ಆಗುತ್ತೀದೆ. ಕರುನಾಡಿನಲ್ಲಿ ಹುಟ್ಟಿ ಹರಿಯುವ ಬಹುತೇಕ ನದಿಗಳ ನೀರು ಹೊರರಾಜ್ಯಗಳ ಪಾಲಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಹಿರಿಯ ವಕೀಲರಾದ ಹೆಚ್.ಕೃಷ್ಣಮೂರ್ತಿ ಮಾತನಾಡಿ ಕನ್ನಡ ಭಾಷೆಯ ಬಳಕೆಯನ್ನು ಕಾನೂನಿನ ಒತ್ತಡದ ಮೂಲಕ ಬಳಕೆ ಮಾಡಬೇಕಾದ ಪರಿಸ್ಥಿತಿ ನಮ್ಮ ನಾಡಿನಲ್ಲಿ ನಿರ್ಮಾಣ ಆಗಿದೆ. ಕಾನೂನು ಪಾಲನೆ ಮಾಡವು ನಾವೇ ಕಾನೂನಿನ ವ್ಯವಸ್ಥೆಯನ್ನು ಧಿಕ್ಕರಿಸಿ ನಡೆಯುತ್ತೀದ್ದೇವೆ. ಇದು ಬದಲಾಗಿ ನಾವೇಲ್ಲರೂ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.