ತುಮಕೂರು:
ಜಿಲ್ಲೆಯಲ್ಲಿ ವೀರಶೈವ ಸಮುದಾಯ ಇಷ್ಟು ಉತ್ತುಂಗಕ್ಕೆರಲು ಕಾರಣರಾದವರು ದಿವಂಗತರಾದ ಜಿ.ಎಸ್.ಶಿವನಂಜಪ್ಪ ಮತ್ತು ಮಲ್ಲಿಕಾರ್ಜುನಯ್ಯ ಅವರುಗಳನ್ನು ಸಮುದಾಯ ಎಂದಿಗೂ ಮರೆಯುವಂತಿಲ್ಲ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.
ನಗರದ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಮಾಜಿ ಶಾಸಕ ಜಿ.ಎಸ್.ಶಿವನಂಜಪ್ಪ ಅವರು 90ನೇ ಹುಟ್ಟು ಹಬ್ಬದ ಅಂಗವಾಗಿ ಸಿದ್ದರಾಮೇಶ್ವರ್ ಸಹಕಾರಿ ಬ್ಯಾಂಕು, ಗುರುಕುಲ ವಿದ್ಯಾರ್ಥಿನಿಲಯ ಹಾಗೂ ಗುರುಕುಲ ವಿವಿದೋದ್ದೇಶ ಸಹಕಾರಿ ಸಂಘ,ಬೆಂಗಳೂರಿನ ಅಪಲೋ ಆಸ್ಪತ್ರೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಹಳ್ಳಿಗಾಡಿನಿಂದ ನಗರಕ್ಕೆ ಬಂದಂತಹ ವೀರಶೈವ ಸಮುದಾಯ ಜನರು, ನಗರದಲ್ಲಿ ನೆಲೆಗೊಳ್ಳಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಅಂದಿನ ಕಾಲದಲ್ಲಿ ಈ ಇಬ್ಬರು ಮಹನೀಯರು ಮಾಡಿದ ಪರಿಣಾಮ, ಇಂದು ನಗರದಲ್ಲಿ ವೀರ ಶೈವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಲು ಸಾಧ್ಯವಾಗಿದೆ ಎಂದರು.
ಆರೋಗ್ಯ ಇಂದು ಎಲ್ಲರಿಗೂ ಬೇಕಾಗಿದೆ.ಮನುಷ್ಯನಿಗೆ ಅತಿ ಅಗತ್ಯವಿರುವ ವ್ಯವಸ್ಥೆಗಳಲ್ಲಿ ಆರೋಗ್ಯ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ನಂತರದ ಸ್ಥಾನದಲ್ಲಿ ಶಿಕ್ಷಣ,ಆಹಾರ ಬರುತ್ತದೆ.ಒತ್ತಡದ ಬದುಕಿನಲ್ಲಿ ಹಣಗಳಿಕೆಗೆ ಹೆಚ್ಚು ಒತ್ತು ನೀಡಿದ ಪರಿಣಾಮ ಆರೋಗ್ಯ ಸಮಸ್ಯೆಗಳು ಅತಿ ಚಿಕ್ಕ ವಯಸ್ಸಿಗೆ ತಲೆದೊರುತ್ತಿದೆ.ಇಂದಿಗೂ ಹಳ್ಳಿಗಾಡಿನಲ್ಲಿ ಮನುಷ್ಯನಿಗೆ ಬರುವ ಕಾಯಿಲೆಗೂ ದೇವರು,ದಿಂಡಿರು ಕಾರಣ ಎಂಬ ಮೂಢನಂಬಿಕೆ ಬಿತ್ತಲಾಗುತ್ತಿದೆ. ಇದರಿಂದ ಹೊರಬರುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಇದನ್ನು ಮಾಡುವವನೇ ನಿಜವಾದ ಜನನಾಯಕ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ನುಡಿದರು.
ಹೃದ್ರೋಗದ ಬಗ್ಗೆ ಉಪನ್ಯಾಸ ನೀಡಿದ ಬೆಂಗಳೂರಿನ ಅಪಲೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ವೆಂಕಟೇಶ್,ಇತ್ತೀಚಿನ ದಿನಗಳಲ್ಲಿ ಮಾನವನ ಜೀವನ ಶೈಲಿಯಿಂದ ಅತಿ ಚಿಕ್ಕವಯಸ್ಸಿನ ಮಕ್ಕಳಲ್ಲಿಯೇ ಹಾರ್ಟ್ ಅಟ್ಯಾಕ್, ಹಾರ್ಟ್ ಪೇಲ್ಯೂರ್ ನಂತಹ ಕಾಯಿಲೆಗಳು ಹೆಚ್ಚುತಿದ್ದು, ಇವುಗಳ ಬಗ್ಗೆ ಹೆಚ್ಚಿನ ನಿಗಾವಹಿಸುವ ಅವಶ್ಯಕತೆ ಇದೆ.ಹೃದಯ ಸ್ತಂಭನ,ಕ್ಯಾನ್ಸರ್‍ಗಿಂತಲೂ ಅತ್ಯಂತ ಅಪಾಯಕಾರಿ ರೋಗ.ಧೂಮಪಾನ, ಮಧ್ಯಪಾನ ಮಾಡುವವ ವ್ಯಕ್ತಿಗಳಲ್ಲಿ ಇಂತಹ ರೋಗ ಕಾಣಿಸಿಕೊಂಡರೆ ಬದುಕುಳಿಯುವ ಸಾಧ್ಯತೆ ಅತ್ಯಂತ ಕಡಿಮೆ.ದೈಹಿಕ ಚಲನವಲನದಿಂದ ಕೂಡಿದ ಜೀವನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಕಾಲ ಬದುಕುವಂತೆ ಸಲಹೆ ನೀಡಿದರು.
ಮೂಳೆ ಮತ್ತು ಕೀಲು ರೋಗ ತಜ್ಞ ಡಾ.ಯೋಗೀಶ್ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಅಸ್ಟಿಯಾ ಪೋರಸಿಸ್ ಎಂಬ ಖಾಯಿಲೆ ಚಿಕ್ಕ ವಯಸ್ಸಿನವರನ್ನು ಕಾಡುತ್ತಿದೆ.ಇದಕ್ಕೆ ಪ್ರಮುಖ ಕಾರಣ.ದೇಹಕ್ಕೆ ಮಿಟಮಿನ್ ಡಿ ಅಂಶದ ಕೊರತೆ.ಬೆಳಗಿನ ವೇಳೆ ದೊರೆಯುವ ಎಳೆ ಬೀಸಿಲಿನಲ್ಲಿ ಮನುಷ್ಯನ ದೇಹಕ್ಕೆ ಮಿಟಮಿನ್ ಡಿ ಪುಕ್ಕಟ್ಟೆಯಾಗಿ ದೊರೆಯುತ್ತದೆ.ಬೆಳಗಿನ ಹೊತ್ತು ಬೇಗ ಎದ್ದು,ವಾಯುವಿಹಾರ ಮಾಡುವುದರಿಂದ ಮೂಳೆಗಳ ಸವೇತದಂತಹ ಕಾಯಿಲೆಯಿಂದ ಹೊರಬರಬಹುದೆಂದು ಸಲಹೆ ನೀಡಿದರು.
ಶ್ರೀಸಿದ್ದರಾಮೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ,ಶಿವನಂಜಪ್ಪ ಅವರು ರಾಜಕೀಯವಾಗಿ, ಸಾಮಾಜಿಕವಾಗಿ ಸಮುದಾಯದ ಬಗ್ಗೆ ಕಾಳಜಿ ಹೊಂದಿದ್ದವರು.ಅಂತಹವರ ಹೆಸರಿನಲ್ಲಿ ನಡೆಯುತ್ತಿರುವ ಈ ಆರೋಗ್ಯ ಶಿಬಿರ ಹೆಚ್ಚು ಜನರಿಗೆ ಉಪಯೋಗಕಾರಿಯಾಗಲಿ ಎಂದರು.
ವೇದಿಕೆಯಲ್ಲಿ ಶ್ರೀಸಿದ್ದರಾಮೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪಿ.ಎನ್.ಶಿವರುದ್ರಯ್ಯ,ಉಪಾಧ್ಯಕ್ಷರಾದ ಬಿ.ಬಿ.ಮಹದೇ ವಯ್ಯ,ನಿರ್ದೇಶಕರಾದ ಶ್ರೀಮತಿ ಬಿ.ಎಸ್.ಜೋತಿಲಕ್ಷ್ಮಿ,ಗುರುಕುಲ ವಿವಿದೋದ್ದೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮಲ್ಲಿಕಾರ್ಜು ನಯ್ಯ,ಸಕ್ಕರೆ ರೋಗ ತಜ್ಞರಾದ ಡಾ.ಧೀರಜ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಹೃದ್ರೋಗ,ಮೂಳೆ ಮತ್ತು ಕೀಲು,ಮಧುಮೇಹ, ರಕ್ತದೊತ್ತಡ ಹಾಗೂ ಇನ್ನಿತರ ಕಾಯಿಲೆ ಬಗ್ಗೆ ಅಪಲೋ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಗಳನ್ನು ಪರೀಕ್ಷಿಸಿ, ಸಲಹೆ, ಸೂಚನೆ ಜೊತೆಗೆ,ಔಷಧ ವಿತರಿಸಿದರು. ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರ ಭಾಗವಹಿಸಿದ್ದರು.(ಫೊಟೋ ಇದೆ)