ಮಧುಗಿರಿ:
ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಾಪಗ್ರಸ್ಥ ಸರ್ಕಾರಗಳು ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಟೀಕೆ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಇರುವ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ-ಪೆÇಲೀಸ್ ಇಲಾಖೆ -ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಯವರಿಗೆ ಕೊರೋನ ಎದುರಿಸಲು ಬೇಕಾಗಿರುವ ಸಲಕರಣೆಗಳು ಮತ್ತು 2 ಆಂಬ್ಯುಲೆನ್ಸ್ ಗಳನ್ನು ತಾಲ್ಲೂಕು ಆಡಳಿತಕ್ಕೆ ವಿತರಿಸಿ ನಂತರ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಇಳಿವಯಸ್ಸಿನಲ್ಲಿ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಅವರನ್ನು ಟೀಕಿಸುವುದಿಲ್ಲ ಆದರೆ ಅವರಿಗೆ ಆಡಳಿತದ ಮೇಲೆ ಹಿಡಿತ ಇಲ್ಲದಂತೆ ಕಾಣುತ್ತಿದೆ, ದಿಕ್ಕುದೆಸೆಯಿಲ್ಲದ ಇಂತಹ ಸರ್ಕಾರ ಕೊನೆಗಾಣಬೇಕು. ಬಿಎಸ್ ವೈರವರು ಅಸಹಾಯಕತೆಗೆ ಅವರು ಅಣ್ಣಮ್ಮ ದೇವಿಯ ಮೊರೆ ಹೋಗಿರುವುದು ಸಾಕ್ಷಿ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿಮೆ ಮಾಡಿದ್ದು, ಇಂಥ ಕೋವಿಡ್ ಸಂಕಷ್ಟದಲ್ಲಿ ಎರಡು ಕೆಜಿ ಅಕ್ಕಿ ನೀಡುತ್ತಿರುವುದು ಬಡವರ ಅನ್ನ ಕಿತ್ತುಕೊಳ್ಳುವುದರಿಂದ ಬಡ ಜನರ ಶಾಪ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಹತ್ತು ಕೆ.ಜಿ. ಅಕ್ಕಿ ವಿತರಿಸಲಾಗುವುದು ಎಂದರು. ಲಾಕ್ ಡೌನ್ ಬಗ್ಗೆ ಗೊಂದಲ: ರಾಜ್ಯದ ಸಿಎಂ ಮತ್ತು ಸಿಎಸ್‍ಗಳ ದ್ವಂದ್ವ ನಿಲುವುಗಳ 1ನೇ ಪುಟದಿಂದ
ಹೇಳಿಕೆಗಳು ಲಾಕ್ ಡೌನ್ ಬಗ್ಗೆ ನಾಗರಿಕರಲ್ಲಿ ಗೊಂದಲ ಉಂಟಾಗಿದೆ. ಭಾಗಶಃ ಅಥವಾ ಪೂರ್ಣ ಲ್ಯಾಕ್ ಡೌನ್ ಎಂಬುದರ ಬಗ್ಗೆ ಗೊಂದಲ ನಿವಾರಣೆಯಾಗಬೇಕೆಂದರು.
ತಾಲ್ಲೂಕಿನಲ್ಲಿ ಮಾಹಿತಿ ಪ್ರಕಾರ ಇಲ್ಲಿಯವರೆಗೆ 200ಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ. ಬಹುತೇಕ ಸಾರ್ವಜನಿಕ ಜೀವನದಲ್ಲಿರುವವರು ಸಾವನ್ನಪ್ಪಿದ್ದು, ಇವರೆಲ್ಲರ ಆತ್ಮಕ್ಕೆ ಶಾಂತಿಕೋರಿ ಇವರುಗಳ ಅಗಲಿಕೆ ಅವರ ಕುಟುಂಬ ವರ್ಗದವರಿಗೆ ದುಖಃ ಬರಿಸುವ ಶಕ್ತಿ ದೇವರು ದಯ ಪಾಲಿಸಲಿ ಎಂದರು.
ಕೊರೋನ ಮೊದಲ ಅಲೆಗಿಂತ ಭೀಕರವಾಗಿ ಎರಡನೆ ಅಲೆಯಲ್ಲಿ ಈ ಕಾಯಿಲೆ ತೀವ್ರಗೊಂಡು ಯುವ ಸಮುದಾಯದ ಹೆಚ್ಚು ಮೃತಪಟ್ಟ ಪಡುತ್ತಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ತೀವ್ರತರದ ಆಘಾತ ಉಂಟು ಮಾಡುತ್ತದೆಂದು ತಜ್ಞರ ಮತ್ತು ಮಾಧ್ಯಮಗಳ ವರದಿಗಳ ಬೆಚ್ಚಿಬೀಳಿಸುವಂತ್ತಿದೆಯಾದರೂ ಜನರು ಧೈರ್ಯ ಗುಂದದೆ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಪೇಟೆಂಟ್ ತೆಗೆದು ಹಾಕಿದ್ದು ಉತ್ಪಾದನೆ ಹೆಚ್ಚಲಿದೆ ಔಷಧಿ ಮತ್ತು ಲಸಿಕೆ ಬಗ್ಗೆ ಭಯ ಬೇಡವೆಂದರು.
ಪ್ರಸ್ತುತ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ಕಂದಾಯ ಇಲಾಖೆಯವರು ಆರೋಗ್ಯ ಇಲಾಖೆಯವರು ಪೆÇೀಲಿಸರು ಪೌರಕಾರ್ಮಿಕರು ತಮ್ಮಗಳ ಜೀವಗಳನ್ನು ಪಣಕಿಟ್ಟು ಬೇರೆಯವರ ಜೀವ ಉಳಿಸಲು ಹಗಲಿರುಳು ಸೇವೆ ಸಲ್ಲಿಸುತ್ತಿದ್ದು ಇವರುಗಳ ಅವಿರತ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದ ಸಿಎಂ ಮಮತ ಬ್ಯಾನರ್ಜಿರವರ ಸರಳ ಜೀವನ, ಹೋರಾಟ ಗಾರ್ತಿಯ ಗುಣ, ಪಟ್ಟಭದ್ರರ ವಿರುದ್ಧ ಹೋರಾಟ ಗುಣ ಕಂಡು ಅವರ ಪಕ್ಷಕ್ಕೆ ಚುನಾವಣಾ ಸಂದರ್ಭದಲ್ಲಿ 1 ಲಕ್ಷ ರೂ ದೇಣಿಗೆ ನೀಡಿರುವುದಾಗಿ ಕೆ.ಎನ್.ರಾಜಣ್ಣ ತಿಳಿಸಿದರು.
ಮಧುಗಿರಿ ಬ್ಲಾಕ್ ಕಾಂಗ್ರೆಸ್, ಕೆ. ಎನ್.ರಾಜಣ್ಣ ಅಭಿಮಾನಿ ಬಳಗ ಮತ್ತು ಆರ್ ರಾಜೇಂದ್ರ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಆಸ್ಪತ್ರೆಗೆ ಹತ್ತು ಆಕ್ಸಿಜನ್ ಸಿಲಿಂಡರ್, ಪಿಪಿಇ ಕಿಟ್-100, ಪೆÇಲೀಸ್ ಇಲಾಖೆಗೆ ಸ್ಯಾನಿಟೈಸರ್, ಫೇಸ್ ಶೀಲ್ಡ್, ಕಂದಾಯ ಇಲಾಖೆಗೆ ಪಿಪಿಕಿಟ್ 800, ವಾಟರ್ ಫಿಲ್ಟರ್- 2, ಬೆಡ್ ಶೀಟ್ ನೂರು, ಆರೋಗ್ಯ ಇಲಾಖೆಗೆ 2 ಆಂಬ್ಯುಲೆನ್ಸ್ ಕೆ. ಎನ್. ರಾಜಣ್ಣನವರು ವಿತರಿಸಿದರು.