ತುಮಕೂರು:
ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿರುವ 121 ಗ್ರಾಮ ಪಂಚಾಯತಿಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಸೋಂಕಿನ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ.
ತುಮಕೂರು ತಾಲೂಕಿನ ಬೆಳಗುಂಬ, ಕೆಸ್ತೂರ್, ತಿಮ್ಮರಾಜನಹಳ್ಳಿ, ಕೋರಾ, ಅರಕೆರೆ, ಸ್ವಾಂದೇನಹಳ್ಳಿ, ಊರುಕೆರೆ, ಬೆಳ್ಳಾವಿ, ದೊಡ್ಡನಾರವಂಗಲ, ಬುಗುಡನಹಳ್ಳಿ, ಮಲ್ಲಸಂದ್ರ, ಸೀತಕಲ್ಲು, ಹಿರೇಹಳ್ಳಿ, ಮೈದಾಳ, ಕೆಸರುಮಡು, ಹೊನ್ನುಡಿಕೆ, ಹೊಳಕಲ್, ಪಾಲಸಂದ್ರ, ಹರಳೂರು, ಹೆತ್ತೇನಹಳ್ಳಿ, ಹೆಬ್ಬೂರು, ಕನಕೊಪ್ಪೆ, ಗಂಗೋನಹಳ್ಳಿ,ಸಿರಿವರ, ಬಳ್ಳಗೆರೆ, ನಾಗವಲ್ಲಿ, ಹೆಗ್ಗೆರೆ ಗ್ರಾಮ ಪಂಚಾಯತಿಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಘೋಷಿಸಲಾಗಿದೆ.
ಅದರಂತೆಯೇ, ಗುಬ್ಬಿ ತಾಲೂಕಿನ ಹಾಗಲವಾಡಿ, ಮಂಚಲದೊರೆ, ಹೊಸಕೆರೆ, ಚೇಳೂರು, ಬಿದರೆ, ಮೂಗನಾಯಕನಕೋಟೆ, ದೊಡ್ಡಗುಣಿ, ಮಾರಶೆಟ್ಟಿಹಳ್ಳಿ, ನಿಟ್ಟೂರು, ಅಮ್ಮನಗಟ್ಟ, ಎಂಎಚ್.ಪಟ್ನ, ಹಡಗೂರು, ಹೇರೂರು, ಕಡಬ, ಜಿ.ಹೊಸಹಳ್ಳಿ, ಸಿ.ಎಸ್.ಪುರ.
ಶಿರಾ ತಾಲೂಕಿನ ತಡಕಲೂರು, ದೊಡ್ಡಬಣಗೆರೆ, ಹುಲಿಕುಂಟೆ, ದ್ವಾರನಕುಂಟೆ, ಬೇವಿನಹಳ್ಳಿ, ಬರಗೂರು, ಹಂದಿಕುಂಟೆ, ನಾದೂರು, ಹೆಂದೊರೆ, ಹುಣಿಸೇಹಳ್ಳಿ, ತಾವರೇಕೆರೆ, ಗೌಡಗೆರೆ, ಭುವನಹಳ್ಳಿ, ಲಕ್ಷ್ಮಿ ಸಾಗರ, ಕೊಟ್ಟ, ಮೇಲುಕುಂಟೆ, ಮದಲೂರು, ಹೊನ್ನಗೊಂಡನಹಳ್ಳಿ, ರತ್ನಸಂದ್ರ, ಚಿಕ್ಕನಹಳ್ಳಿ, ಭೂಪಸಂದ್ರ, ತರೂರು, ಚಿನ್ನೇನಹಳ್ಳಿ, ಕಳ್ಳಂಬೆಳ್ಳ, ಗೋಪಾಲದೇವರಹಳ್ಳಿ, ಸೀಬಿ ಅಗ್ರಹಾರ, ದೊಡ್ಡ ಅಗ್ರಹಾರ, ನೇರಳೇಗುಡ್ಡ, ಬುಕ್ಕಾಪಟ್ಟಣ, ರಾಮಲಿಂಗಾಪುರ, ಹುಯ್ಲೊರೆ, ಯಲಿಯೂರು.
ಕೊರಟಗೆರೆ ತಾಲೂಕಿನ ತೋವಿನಕೆರೆ, ಬೋದಗವಿ, ಅಗ್ರಹಾರ, ತುಂಬಾಡಿ, ವಡ್ಡಗೆರೆ, ಅಕ್ಕಿರಾಂಪುರ, ಹೊಳವನಹಳ್ಳಿ, ಹುಲಿಕುಂಟೆ, ಹಂಚಿಹಳ್ಳಿ, ತೀತಾ, ಮಾವತೂರ್, ನೀಲಗೊಂಡನಹಳ್ಳಿ, ಕೊಳಾಲ.
ತಿಪಟೂರು ತಾಲೂಕಿನ ಭಕ್ತರಹಳ್ಳಿ, ಹುತ್ರಿದುರ್ಗ, ಎಚ್. ದುರ್ಗ, ಜಿನ್ನಗರ, ಅಮೃತೂರು, ಕೊಪ್ಪ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಲಿಯೂರು, ತಿಮ್ಮನಹಳ್ಳಿ, ಕಂದಿಕೆರೆ, ಶೆಟ್ಟಿಕೆರೆ. ತಿಪಟೂರು ತಾಲೂಕಿನ ಹಾಲ್ ಕುರಿಕೆ, ಕರಡಿ, ಬಿಳಿಗೆರೆ, ಮತಿಹಳ್ಳಿ,ನೊಣವಿನಕೆರೆ, ಹುಣಸೆಗಟ್ಟ. ತುರುವೇಕೆರೆ ತಾಲೂಕಿನ ಕನತೂರ್, ಗೋಣಿತುಮಕೂರು, ಮಾಯಸಂದ್ರ, ಕೊಡಗೇಹಳ್ಳಿ, ಮಾವಿನಕೆರೆ. ಮಧುಗಿರಿ ತಾಲೂಕಿನ ಮಿಡಿಗೇಶಿ, ಕೋಡ್ಲಾಪುರ, ಬಡವನಹಳ್ಳಿ, ದೊಡ್ಡೇರಿ, ಚಂದ್ರಗಿರಿ, ದಬ್ಬೇಘಟ್ಟ ಗ್ರಾಮ ಪಂಚಾಯತಿಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.