ತುಮಕೂರು:
ಜಿಲ್ಲೆಯ ಕೊರಟಗೆರೆ ತಾಲ್ಲೂಕು ಬೊಮ್ಮಲದೇವಿಪುರ ಗ್ರಾಮದ ರಂಗನಾಥ್ ಎಂಬ 35 ವರ್ಷದ ಯುವಕ ಕೊರೋನದಿಂದ ಮೃತಪಟ್ಟಿದ್ದು ಮೃತ ದೇಹವನ್ನು ಶವಸಂಸ್ಕಾರ ಮಾಡಲು ಸಂಬಂಧಿಕರು ಭಯದಿಂದ ನಿರಾಕರಿಸಿದ್ದರು.
ಈ ಕಾರಣದಿಂದ ಗುಲಾಮಗಿರಿ ಚಿತ್ರದ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಟೈಗರ್ ನಾಗ್. ಜೆಟ್ಟಿ ಅಗ್ರಹಾರ ನಾಗರಾಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಯಾಜ್ ಅಹಮದ್ ಮತ್ತು ಮುಸ್ಲಿಂ ತಂಡದವರು ಸ್ಧಳಕ್ಕೆ ಆಗಮಿಸಿ ಮೃತ ದೇಹವನ್ನು ಶವಸಂಸ್ಕಾರ ಮಾಡಿ ಮಾನವಿಯತೆ ಮೆರೆದಿದ್ದಾರೆ.
ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆ ಮಾಡಲು ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿಷಯ ತಿಳಿಸಿದರು ಯಾರೋಬ್ಬರೂ ಸಹಾಯಕ್ಕೆ ಬಂದಿಲ್ಲ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಎಷ್ಟು ಭಾರಿ ಕರೆ ಮಾಡಿದರೂ ಕರೆಯನ್ನು ನಿರಾಕರಿಸಿದರು.
ಇಂತಹ ಅಧಿಕಾರಿಗಳನ್ನ ಅಮಾನತ್ತು ಮಾಡಿ ಕೆಲಸದಿಂದ ವಜಾ ಮಾಡಬೇಕು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಮದ್ ಫಾರೂಕ್, ತಬ್ರೇಜ್, ಮಹಮದ್, ಗೌಸ್, ಸುಹೇಲ್, ವಿಹನ್, ರೆಹಮಾನ್ ಸಾಥ್ ನೀಡಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.