ಮಧುಗಿರಿ:

      ಕೊರೋನ ಲಾಕ್ ಡೌನ್ ನಿಂದಾಗಿ ಮಧುಗಿರಿಯಲ್ಲಿ ಅನವಶ್ಯಕವಾಗಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸವಾರರಿಗೆ ದಂಡವಿಲ್ಲ, ಲಾಠಿ ರುಚಿ ಇಲ್ಲದೆ ಸರಳವಾಗಿ ಪೆÇಲೀಸ್ ಠಾಣಾ ಆವರಣದಲ್ಲಿ ಕುಳ್ಳರಿಸಿ ಅವರುಗಳಿಗೆ ಊಟವನ್ನು ನೀಡಿ ಮಾನವೀಯತೆಯನ್ನು ಮೆರೆದ ಡಿವೈಎಸ್ಪಿ ಕೆ.ಜಿ. ರಾಮಕೃಷ್ಣ ಅವರ ಕ್ರಮಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದೆರಡು ದಿನಗಳಿಂದ ಮಧುಗಿರಿ ಪೆÇೀಲಿಸರು ದ್ವಿಚಕ್ರವಾಹನಗಳನ್ನು ವಶ ಪಡಿಸಿಕೊಂಡು ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಆದರೆ ವಾಹನ ವಶಪಡಿಸಿಕೊಂಡ ತಕ್ಷಣವೇ ಶಾಸಕರು, ಮಾಜಿ ಶಾಸಕರು ಪ್ರಭಾವಿ ವ್ಯಕ್ತಿಗಳಿಂದ ವಾಹನ ಬಿಡಿಸಿಕೊಳ್ಳಲು ಇನ್ಫ್ಲೂಯೆನ್ಸ್ ಮಾಡಿಸುತ್ತಿದ್ದ ಸರ್ವಸಾಮಾನ್ಯವಾಗಿತ್ತು. ಒತ್ತಡಕ್ಕೆ ಸಿಲುಕಿದ ಪೆÇಲೀಸರಿಗೆ ಇಂಥ ಕ್ರಮದಿಂದ ರಿಲೀಫ್ ಸಿಕ್ಕಿದಂತಾಗಿದೆ.
ಡಿವೈಎಸ್ ಪಿ ಕೆ. ಜಿ .ರಾಮಕೃಷ್ಣ ರವರು ವಿಭಿನ್ನವಾಗಿ ತಮ್ಮ ಕಚೇರಿ ಮುಂಭಾಗದಲ್ಲಿ ವಾಹನಗಳನ್ನು ವಶಪಡಿಸಿಕೊಂಡು ಸವಾರರನ್ನು ಆವರಣದಲ್ಲಿ ಕುಳ್ಳರಿಸಿ ನೂರು ರೂ ದಂಡ ಹಾಕಿದರೆ ಕಟ್ಟುತ್ತಾರೆ ,ಐನೂರು ರೂ ದಂಡ ಹಾಕಿದರೆ ಹೊರೆಯಾಗುತ್ತದೆ. ಇದ್ಯಾವುದೂ ಬೇಡ ಸಂಜೆಯವರೆಗೂ ಆವರಣದಲ್ಲೇ ಸವಾರರನ್ನು ಕುಳ್ಳಿರಿಸಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಊಟ ಮಾಡದ ಅವರಿಗೆ ತಿಳಿ ಹೇಳಿ ಊಟ ಮಾಡುವಂತೆ ಮನವೊಲಿಸುವ ಮೂಲಕ ಡಿವೈಎಸ್ಪಿ ಮಾನವೀಯತೆ ಮೆರೆದಿದ್ದಾರೆ.
ಮಧುಗಿರಿಯಲ್ಲಿ ಬುಧವಾರ ಒಂದೇ ದಿನ ಮುನ್ನೂರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಈ ವೈರಸ್ ಹರಡುವಿಕೆ ಆರಂಭವಾದಗಿನಿಂದ ಗರಿಷ್ಟ ಸೋಂಕಿನ ಪತ್ತೆಯಾಗಿರುವುದು ಇದೇ ಮೊದಲು.
ಇದಕ್ಕೆಲ್ಲ ಕಾರಣ ನೋಡಿದರೆ ಆರೋಗ್ಯ ಇಲಾಖೆಯ ಹೆಸರು ಹೇಳಲಿಚ್ಛಿಸದ ನೌಕರ ಕಳೆದ ಬಾರಿ ಮೊದಲ ಅಲೆ ಸಂದರ್ಭದಲ್ಲಿ ಸೋಂಕಿತನ ಮನೆ ಮತ್ತು ಏರಿಯಾವನ್ನು ಸಿಲ್ಡಡೌನ್ ಮಾಡಲಾಗುತ್ತಿತ್ತು. ತದನಂತರ ಸೋಂಕಿತ ಮನೆ ಮುಂದೆ ಇಲಾಖೆ ಯಿಂದ ಎಚ್ಚರಿಕೆಯ ಕರಪತ್ರವನ್ನು ಅಂಟಿಸಲಾಗುತ್ತಿತ್ತು. ಈಗ ವ್ಯವಸ್ಥೆ ಬದಲಾದ ಕಾರಣ ಸೋಂಕಿತ ಸಾರ್ವಜನಿಕರ ಮಧ್ಯದಲ್ಲೇ ಓಡಾಡುವಂತಾಗಿದೆ .ಬ್ಯಾಂಕು ವಾಣಿಜ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ನಾಗರಿಕರಿಗೆ ಸುಲಭವಾಗಿ ಹರಡಲು ಕಾರಣವಾಗುತ್ತಿದೆ .ಇದೇ ರೀತಿ ಮುಂದುವರೆದರೆ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ ಇದು ತಡೆಯಲು ಅಸಾಧ್ಯ ಎನ್ನುತ್ತಾರೆ.
ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಬುಧವಾರದಂದು 7ಸೋಂಕಿತರು ಮೃತಪಟ್ಟಿದ್ದು ಅವರ ಶವಸಂಸ್ಕಾರಕ್ಕೆ ಸಾಲುಗಟ್ಟಿ ನಿಂತಿದ್ದವು. ಮಾಜಿ ಶಾಸಕ ಕೆ ಎನ್ ರಾಜಣ್ಣ ಅವರು ಮಾಡಿರುವ ಆರೋಪ ನಿಜ ಎನ್ನುವಂತಾಗಿದೆ ,ಸರ್ಕಾರ ಮೃತರ ಸಂಖ್ಯೆ ನಿಖರವಾಗಿ ನೀಡದೆ ತಪ್ಪು ಮಾಹಿತಿಯನ್ನು ನೀಡುತ್ತಿರುವುದು ಸಾಬೀತಾಗಿದೆ ಕಾರಣ ಸರಕಾರದ ಲ 3 ಮೃತಪಟ್ಟಿದ್ದಾರೆಂದು ಲೆಕ್ಕ ನೀಡಿದ್ದ 7ಜನ ಶವಸಂಸ್ಕಾರಕ್ಕೆ ಸಿದ್ದವಾಗಿರುವುದು ನಿದರ್ಶನವಾಗಿದೆ.

(Visited 13 times, 1 visits today)