ತುಮಕೂರು : 

      ಕೋವಿಡ್-19 ಎರಡನೇ ಅಲೆ ವ್ಯಾಪಿಸಿರುವ ಕಾರಣ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿ‌ ಮಾಲೀಕರ ಆರೋಗ್ಯದ ಹಿತದೃಷ್ಟಿಯಿಂದ 2021ರ ಮೇ ಮಾಹೆಯ ಪಡಿತರವನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ಆಧಾರ್ ಓಟಿಪಿ ಮೂಲಕ ವಿತರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದ್ದಾರೆ.

      ಪಡಿತರ ಚೀಟಿದಾರರನ್ನು ಬಯೋ ದೃಢೀಕರಣಕ್ಕಾಗಿ ಒತ್ತಾಯಿಸಬಾರದು. ಬಯೋ ದೃಢೀಕರಣಕ್ಕಾಗಿ ಒತ್ತಾಯಿಸಿದಲ್ಲಿ ಗ್ರಾಹಕರು ಅವರ ವಿರುದ್ಧ ಆಯಾ ತಾಲೂಕಿನ ತಹಸೀಲ್ದಾರ್/ಆಹಾರ ಶಿರಸ್ತೇದಾರ್/ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

(Visited 4 times, 1 visits today)