ತುಮಕೂರು:

       ಜಿಲ್ಲೆಯಲ್ಲಿ ವ್ಯಾಕ್ಸಿನ್ ಮತ್ತು ಅಕ್ಸಿಜನ್ ಕೊರತೆಯಿದ್ದು, ಇದರ ಬಗ್ಗೆ ಗಮನಹರಿಸಲು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಸೂಚಿಸುವಂತೆ ಸಂಸದ ಜಿ.ಎಸ್.ಬಸವರಾಜು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ.

      ತಮ್ಮ ಗೃಹ ಕಚೇರಿಯಲ್ಲಿ ಜೆ.ಪಿ.ನಡ್ಡಾ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಬೆಳಗಾವಿ ನಂತರದ ಎರಡನೇ ಅತಿ ದೊಡ್ಡ ಜಿಲ್ಲೆ ತುಮಕೂರು, 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಬೆಂಗಳೂರು ನಗರಕ್ಕೆ ಹತ್ತಿರವಿದ್ದು, ಸರಕಾರ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಬಹುತೇಕರು ಜಿಲ್ಲೆಗೆ ವಾಪಸ್ಸಾಗಿದ್ದೇ ಕೋವಿಡ್ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ.

ಜಿಲ್ಲಾಡಳಿತ ನಿರಂತರ ಶ್ರಮಪಟ್ಟು ಕೋವಿಡ್ ಹರಡದಂತೆ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ತುಮಕೂರು ನಗರವೂ ಸೇರಿದಂತೆ ಜಿಲ್ಲೆಯಲ್ಲಿ 6ಕ್ಕೂ ಹೆಚ್ಚು ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ. ರೋಗಲಕ್ಷಣಗಳಿಲ್ಲದ ಕೋವಿಡ್ ಸೋಂಕಿತರಿಗೆ ಇಲ್ಲಿ ಆರೈಕೆ ಮಾಡಲಾಗುತ್ತಿದೆ.ಉಳಿದಂತೆ ಶಾಸ್ವಕೋಶಕ್ಕೆ ರೋಗ ತಲುಗಿದ ವ್ಯಕ್ತಿಗಳನ್ನು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 8ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಸರಕಾರದ ವಶಕ್ಕೆ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜೆ.ಪಿ.ನಡ್ಡಾ ಅವರಿಗೆ ವಿವರ ನೀಡಿದರು.
ಜಿಲ್ಲೆಯಲ್ಲಿ ಸಾವಿನ ಹೆಚ್ಚಾಗುತ್ತಿದ್ದು ಚಿಕಿತ್ಸೆ ತುರ್ತು ಚಿಕಿತ್ಸೆಯನ್ನು ನೀಡಲು ಅಗತ್ಯ ಔಷಧಿಗಳ ಕೊರತೆ ಇರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

      ಜಿಲ್ಲೆಗೆ ಪ್ರಸ್ತುತ 25 ಕೆ.ಎಲ್.ಅಕ್ಸಿಜನ್ ಬೇಕಾಗಿದೆ. ಆದರೆ ನಮಗೆ ದೊರೆಯುತ್ತಿರುವುದು 15-18 ಕೆ.ಎಲ್ ಮಾತ್ರ. ಇದರಿಂದ ರೋಗಿಗಳ ಚಿಕಿತ್ಸೆ ಬಹಳ ಕಷ್ಟವಾಗಿದೆ.ಆದರೂ ನಮ್ಮ ವೈದ್ಯರುಗಳು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು,ಸಂಬಂಧಪಟ್ಟ ಇಲಾಖೆ ಗಮನಹರಿಸಿ, ಹೆಚ್ಚಿನ ಅಕ್ಸಿಜನ್ ಮತ್ತು ರೆವಿಡಿಸಿಯರ್ ಇಂಜಕ್ಷನ್ ಸರಬರಾಜು ಮಾಡಿದ್ದಾರೆ ಮತ್ತಷ್ಟು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

(Visited 5 times, 1 visits today)