ತುಮಕೂರು:

       ಕಾನೂನು ಮಾಪನಶಾಸ್ತ್ರ ಇಲಾಖೆಯು ಕೋವಿಡ್ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಆಕ್ಸಿಮೀಟರ್ ಗಳನ್ನು ಎಂಆರ್‍ಪಿ ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ 6 ಮೆಡಿಕಲ್ ಸ್ಟೋರ್ ಗಳ ವಿರುದ್ಧ ಮೊಕದ್ದಮೆ ದಾಖಲಿಸಿದೆ.
ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಈ ಮೊಕದ್ದಮೆ ದಾಖಲಿಸಲಾಗಿದೆ.

ಸಹಾಯಕ ನಿಯಂತ್ರಕರ ನೇತೃತ್ವದಲ್ಲಿ ತುಮಕೂರು ಉಪವಿಭಾಗ-1 ಹಾಗೂ 2, ತಿಪಟೂರು ಉಪವಿಭಾಗ ಮತ್ತು ಮಧುಗಿರಿ ಉಪವಿಭಾಗದ ನಾಲ್ಕು ನಿರೀಕ್ಷಕರ ತಂಡ ತಪಾಸಣೆ ನಡೆಸಿದ್ದು, ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ 6 ಔಷಧಿ ಮಳಿಗೆ ಸೇರಿದಂತೆ ಪೊಟ್ಟಣ ಸಾಮಾಗ್ರಿ ರೂಪದ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ 4 ದಿನಸಿ ಅಂಗಡಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

      ಒಟ್ಟಾರೆ 26 ಔಷಧಿ ಮಳಿಗೆ, 64 ದಿನಸಿ ಅಂಗಡಿ ಹಾಗೂ 14 ನ್ಯಾಯ ಬೆಲೆ ಅಂಗಡಿಗಳನ್ನು ತಪಾಸಣೆ ಮಾಡಲಾಗಿದೆ.
ತಪಾಸಣೆ ಸಂದರ್ಭದಲ್ಲಿ ಮೆಡಿಕಲ್ ಸ್ಟೋರ್ ಗಳಿಂದ 7500 ರೂ. ಹಾಗೂ ದಿನಸಿ ಅಂಗಡಿಗಳಿಂದ 4500 ರೂ.ಗಳನ್ನು ವಸೂಲಿ ಮಾಡಲಾಗಿದೆ. ಎಂಆರ್ ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಮೆಡಿಕಲ್ ಸ್ಟೋರ್/ದಿನಸಿ ಅಂಗಡಿಗಳು ಹಾಗೂ ಪಡಿತರ ವಿತರಣೆಯಲ್ಲಿ ತೂಕ ಮತ್ತು ಅಳತೆಯಲ್ಲಿ ವಂಚನೆ ಮಾಡುವ ನ್ಯಾಯ ಬೆಲೆ ಅಂಗಡಿಗಳ ವಿರುದ್ಧ ಸಾರ್ವಜನಿಕ ದೂರು ದಾಖಲಿಸಲು ರಾಜ್ಯ ಮಟ್ಟದ ಸಹಾಯ ವಾಣಿ (080-22253500)ಯನ್ನು ಸ್ಥಾಪಿಸಲಾಗಿದೆ. ದೂರು ನೀಡುವವರು ಸಹಾಯವಾಣಿ ಅಥವಾ ಇ-ಮೇಲ್ ವಿಳಾಸ ಛಿಟm-ಟm-ಞಚಿ@ಟಿiಛಿ.iಟಿ ಅನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8310756754/6362207873ನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿಯಂತ್ರಕ ಶ್ರೀಕಾಂತ್ ಎಂ ಬುರಾನಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

(Visited 7 times, 1 visits today)