ತುರುವೇಕೆರೆ:

      ಪಟ್ಟಣದ ರೋಟರಿ ಕ್ಲಬ್‍ನ ವತಿಯಿಂದ ಕೋವಿಡ್-19 ರೋಗದ ವಿರುದ್ಧ ಹೋರಾಟ ನಡೆಸುತ್ತಿರುವ ತಾಲ್ಲೂಕಿನ ವಾರಿಯರ್ಸ್‍ಗಳಾದ ಆಶಾಕಾರ್ಯಕರ್ತೆಯರು ಮತ್ತು ಹೋಂಗಾರ್ಡ್ ಹಾಗೂ ಪ.ಪಂಚಾಯ್ತಿ ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್, ಎನ್-95 ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಉಚಿತವಾಗಿ ವಿತರಿಸಲಾಯಿತು.

      ಈ ಸಂದರ್ಭದಲ್ಲಿ ರೋಟರಿಕ್ಲಬ್‍ನ ಅಧ್ಯಕ್ಷರು, ಪದಾಧಿಕಾರಿಗಳು, ಪ.ಪಂ ಅಧ್ಯಕ್ಷರು, ಸದಸ್ಯರು, ಪ.ಪಂ ಮುಖ್ಯಾಧಿಕಾರಿ, ಮುಖಂಡರುಗಳೊಂದಿಗೆ ಭಾಗವಹಿಸಿರುವ ಶಾಸಕ ಮಸಾಲ ಜಯರಾಮ್‍ರವರು
ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶೆಟ್ಟಗೊಂಡನಹಳ್ಳಿ, ಮಾಯಸಂದ್ರ, ಮಾಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19 ಪ್ರಕರಣಗಳ ಮಾಹಿತಿ ಪಡೆದರು.

      ಪಾಸಿಟಿವ್ ಬಂದಂತಹ ಪ್ರಕರಣಗಳನ್ನು ಕ್ವಾರಂಟೈನ್ ಒಳಪಡಿಸುವಂತೆ, ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಿ, ಎಲ್ಲರಿಗೂ ಮಹಿತಿ ನೀಡುವಂತೆ ಆಶಾಕಾರ್ಯಕರ್ತೆಯರಿಗೆ ಸೂಚಿಸಲಾಯಿತು. ಶಾಸಕ ಮಸಾಲ ಜಯರಾಮ್‍ರವರು  ಕೋವಿಡ್ ರೋಗಕ್ಕೆ ಸಂಬಂಧಿಸಿದಂತೆ ಔಷದಿಗಳು, ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಉಚಿತವಾಗಿ ವಿತರಿಸಿದರು.

      ಈ ಸಂದರ್ಭದಲ್ಲಿ ಸ್ಥಳೀಯ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ತಾಲ್ಲೂಕು ಅರೋಗ್ಯಾಧಿಕಾರಿಗಳು, ಸ್ಥಳೀಯ ವೈಧ್ಯಾದಿಕಾರಿಗಳು, ಅಶಾಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

(Visited 21 times, 1 visits today)