ತುಮಕೂರು:

        ನಗರದ ಹನುಮಂತಪುರ ಶ್ರೀ ಕೊಲ್ಲಾಪುರದಮ್ಮ ಸಮುದಾಯ ಭವನದ ಆವರಣದಲ್ಲಿ ಉಚಿತ ಉಪಹಾರ ವಿತರಣೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಉಚಿತ ಮೊದಲನೇ ಲಸಿಕಾ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜೀಮಾಬೀ, ಆಯುಕ್ತರಾದ ರೇಣುಕಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್, ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಧರಣೇಂದ್ರಕುಮಾರ್, ಸದಸ್ಯರಾದ ಟಿ.ಜಿ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಶ್ರೀನಿವಾಸಮೂರ್ತಿ ಮುಂತಾದವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಟಿ.ಜಿ.ನರಸಿಂಹಮೂರ್ತಿ ಮಾತನಾಡಿ, ಲಾಕ್‍ಡೌನ್‍ನಿಂದ ನಗರದ ಹನುಮಂತಪುರ ಹಾಗೂ ಸುತ್ತಮುತ್ತಲಿರುವ ಬಡವರು, ನಿರ್ಗತಿಕರು ಊಟದ ಸಮಸ್ಯೆ ಎದುರಿಸುತ್ತಿರುವ ಹಿನ್ನಲೆಯಲ್ಲಿ ಶ್ರೀ ಕೊಲ್ಲಾಪುರದಮ್ಮ ಸಮುದಾಯ ಭವನ ಸಮಿತಿ ವತಿಯಿಂದ ಬೆಳಗಿನ ಉಚಿತ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಶ್ರೀ ಕೊಲ್ಲಾಪುರದಮ್ಮ ಸಮುದಾಯ ಭವನದ ವತಿಯಿಂದ ಈ ಹಿಂದೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಪ್ರಸ್ತುತ ಕೊರೋನ ಸಂಕಷ್ಟದಲ್ಲಿ ಹನುಮಂತಪುರ ಸೇರಿದಂತೆ ನಗರದ 20, 21, 22, 23 ನೇ ವಾರ್ಡುಗಳು ಮತ್ತು ಸುತ್ತಮುತ್ತಲಿರುವ ಅಸಹಾಯಕರಿಗೆ
ವಲಸೆ ಕಾರ್ಮಿಕರಿಗೆ ಬಡವರು, ನಿರ್ಗತಿಕರಿಗೆ ಉಚಿತ ಬೆಳಗಿನ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಇದರ ಜೊತೆಗೆ 20 ರಿಂದ 23ನೇ ವಾರ್ಡಿನ ಎಲ್ಲಾ 45 ವರ್ಷ ಮೇಲ್ಪಟ್ಟ ನಾಗರೀಕರಿಗೆ ಮೊದಲ ಲಸಿಕಾ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ. ಹಲವಾರು ಮಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆಯುತ್ತಿದ್ದಾರೆ. ಇದರಿಂದ ಈ ಭಾಗದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು. ಕೊರೋನ ಲಾಕ್‍ಡೌನ್ ಮುಗಿಯುವವರೆಗೂ ಯಾರೂ ಮನೆಯಿಂದ ಹೊರಬರದೆ ತಮ್ಮ ಆರೋಗ್ಯದ ಕಡೆ ಗಮನ ಹರಿಸಿ, ಮನೆಯಿಂದ ಹೊರ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸದಾ ಮಾಸ್ಕ್ ಧರಿಸಿ ಎಂದು ಸಲಹೆ ನೀಡಿದರು.
ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಬೇಕು. ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಬಾರದು.ಕೊರೊನಾವನ್ನು ಹೊರದೊಡಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಟಿ.ಜಿ.ನರಸಿಂಹಮೂರ್ತಿ ಹೇಳಿದರು. ಈ ವೇಳೆ 20 ನೇ ವಾರ್ಡಿನ ಪಾಲಿಕೆ ಸದಸ್ಯ ಎ.ಶ್ರೀನಿವಾಸ್, 22ನೇ ವಾರ್ಡಿನ ಸದಸ್ಯ ಶ್ರೀನಿವಾಸಮೂರ್ತಿ, ಲಲಿತಾ ರವೀಶ್, ಮುಖಂಡರಾದ ರವೀಶ್ ಜಾಂಗೀರ್, ಆನಂದರಾಮು, ಸಿ.ಆರ್.ಹರೀಶ್, ವಿಪಿನ್, ಹನುಮಂತರಾಜು, ಕುಂಭಿನರಸಯ್ಯ, ಟಿ.ಎಲ್.ಕುಂಭಯ್ಯ, ಎನ್.ಎಸ್.ಶಿವಣ್ಣ, ಆರೋಗ್ಯಾಧಿಕಾರಿ ಡಾ.ರಕ್ಷಿತ್ ಇದ್ದರು.

 

(Visited 7 times, 1 visits today)