ತುಮಕೂರು:
ನಗರದ ಶ್ರೀದೇವಿ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರವು ಕೋವಿಡ್-19 ಹಾಗೂ ಆರೋಗ್ಯ ವೃದ್ಧಿಯ ಕಾಳಜಿಯ ಕುರಿತಾಗಿ ನುರಿತ ತಜ್ಞ ವೈದ್ಯರೊಂದಿಗೆ ಆನ್‍ಲೈನ್ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ರಾಯಚೂರು ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿಯಾದ ಡಾ.ಅಜಯ್ ಪವಾರ್, ಕೊರಟಗೆರೆ ಸರ್ಕಾರಿ ಆಸ್ಪತ್ರೆ ಡಾ.ಪುರುಷೋತ್ತಮ್ ಇವರುಗಳ ಮುಖೇನ ನೂರಾರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕೋವಿಡ್-19 ಬಗ್ಗೆ ಉತ್ತಮ ಸಲಹೆಗಳನ್ನು ನೀಡಲಾಯಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆಗಳನ್ನು ಪಡೆಯುವುದರ ಜೊತೆಗೆ ವೈದ್ಯರೊಂದಿಗೆ ಕೋವಿಡ್-19 ಮತ್ತು ವ್ಯಾಕ್ಸಿಲೇಷನ್ ಬಗ್ಗೆ ಚರ್ಚಿಸಿ ತಮ್ಮ ಸಲಹೆಗಳನ್ನು ಪರಿಹರಿಸಿಕೊಂಡರು.
ಈ ಪ್ರಪಂಚವನ್ನೇ ನಡುಗಿಸಿದ ಈ ಕೊರೋನ ರೋಗದ ಲಕ್ಷಣಗಳನ್ನು ಸೇರಿದಂತೆ, ಬ್ಯಾಕ್ ಫಂಗಸ್, ಶ್ವಾಸಕೋಶದ ಸಂಬಂಧಿಸಿದ ಪರಿಣಾಮಗಳ ಬಗ್ಗೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯ ಬಗ್ಗೆ ಡಾ.ಅಜಯ್ ಪನಾರ್‍ರವರು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕೊರಟಗೆರೆ ಸರ್ಕಾರಿ ಆಸ್ಪತ್ರೆ ಡಾ.ಪುರುಷೋತ್ತಮ್‍ರವರು ಮಾತನಾಡುತ್ತಾ ಕೊರೋನಾಗೆ ಒಳಗಾದ ರೋಗಿಗಳು ಧೃತಿಗೆಡತೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ರೋಗವನ್ನು ಹೆದರಿಸಬೇಕು ಮತ್ತು ಪೋಷಕರಿಗೆ ವ್ಯಾಕ್ಸಿಲೇಷನ್‍ನ ಪ್ರಭಾವದ ಬಗ್ಗೆ ತಿಳಿ ಹೇಳಿದರು.
ಈ ಕೋವಿಡ್-19 ಹಾಗೂ ಆರೋಗ್ಯ ವೃದ್ಧಿಯ ಕಾಳಜಿಯ ಕುರಿತಾಗಿ ನುರಿತ ತಜ್ಞ ವೈದ್ಯರೊಂದಿಗೆ ಆನ್‍ಲೈನ್ ಸಭೆಯಲ್ಲಿ ಶ್ರೀದೇವಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್. ಹುಲಿನಾಯ್ಕರ್, ಹಾಗೂ ಶ್ರೀದೇವಿ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್‍ರವರು ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆನ್‍ಲೈನ್ ಕುರಿತು ಶ್ರೀದೇವಿ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ಮುಭಾರಕ್‍ರವರು ಮಾತನಾಡುತ್ತಾ ಕೊರೋನಾ ವೈರಸ್ ಎಷ್ಟು ಗಂಭೀರವಾಗಿದೆ ಮತ್ತು ನಾವೆಲ್ಲಾ ಎಷ್ಟು ಜಾಗೃತರಾಗಿರಬೇಕು, ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಇದೇ ವೇಳೆಯಲ್ಲಿ ಕೊರೋನಾ ರೋಗಿಗಳ ಸೇವೆಯಲ್ಲಿ ನಿರಂತವಾಗಿರುವ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆ ನೀಡುತ್ತಿರುವ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಿದರು. ಇದರ ಸೇವೆಯಿಂದ ಗಣನೀಯ ಸಂಖ್ಯೆಯಲ್ಲಿ ರೋಗಿಗಳು ಗುಣಮುಖರಾಗಿ ಹೊರಬರುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.