ಕೊರಟಗೆರೆ:

      ಇಸ್ಪೀಟ್ ಜೂಜು ಅಡ್ಡದಲ್ಲಿ ತೊಡಗಿದ್ದವರ ಮೇಲೆ ಸಿಪಿಐ ಸಿದ್ದರಾಮೇಶ್ವರ ರವರ ತಂಡ ದಾಳಿ ಮಾಡಿ 10 ಜನ ಆರೋಪಿಗಳನ್ನ ಬಂಧಿಸಿ ಪಣಕ್ಕಿಟ್ಟಿದ್ದ 10,700 ರೂಗಳನ್ನ ವಶಕ್ಕೆ ಪಡೆದಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

       ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಖಲೀಲ್ ಸಾಬ್ ಎನ್ನುವವರ ಶೆಡ್‍ನ ಹತ್ತಿರ ಇಸ್ಪೀಟ್ ಜೂಜು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಕೊರಟಗೆರೆ ಪೊಲೀಸರ ತಂಡ 10 ಆರೋಪಿಗಳನ್ನ ಜನರನ್ನ ಬಂಧಿಸಿ ಪಣಕ್ಕಿಟ್ಟದ್ದ 10,700 ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

     ದಾಳಿಯ ಸಂದರ್ಭದಲ್ಲಿ ಸಿಪಿಐ ಸಿದ್ದರಾಮೇಶ್ವರ್, ಎಎಸ್‍ಐ ಗಳಾದ ಯೋಗೀಶ್, ಮಂಜುನಾಥ್, ಪೇದೆಗಳಾದ ರಂಗನಾಥ್, ಧರ್ಮಪಾಲ್ ನಾಯ್ಕ್, ಪ್ರಶಾಂತ್, ನಜುರುಲ್ಲಾ ಖಾನ್ ಭಾಗಿಯಾಗಿದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 9 times, 1 visits today)