ತುಮಕೂರು:
ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ,ಮೇ 30ಕ್ಕೆ ಎರಡು ವರ್ಷಗಳು ಪೂರೈಸುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಯುವಮೋರ್ಚಾ ವತಿಯಿಂದ ನಗರದಲ್ಲಿರುವ ಕೋವಿಡ್-19 ಸೋಂಕಿತ ರೋಗಿಗಳಿಗೆ ಪೌಷ್ಠಿಕ ಆಹಾರವಾದ ಡ್ರೈಪ್ರೂಟ್ಸ್‍ಗಳ ಕಿಟ್ ವಿತರಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶಗೌಡ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಅರಕೆರೆ ರವೀಶ್, ಪ್ರಧಾನ ಕಾರ್ಯದರ್ಶಿ ಯಶಸ್ಸ್, ಶಿವಕುಮಾರಸ್ವಾಮಿ ಕಾರ್ಯದರ್ಶಿ ಚೇತನ್, ಗ್ರಾಮಾಂತರ ತಾಲೂಕು ಅಧ್ಯಕ್ಷರಾದ ಶಂಕರಣ್ಣ, ಮುಖಂಡರಾದ ಮಾಸ್ತಿಗೌಡರು, ವೈ.ಟಿ.ನಾಗರಾಜು, ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿದ್ದೇ ಗೌಡ,ಹಾಗೂ ಯುವಮೋರ್ಚಾ ಮುಖಂಡರು ಜಲ್ಲಾಸ್ಪತ್ರೆ, ಸಿದ್ದಗಂಗಾಮಠ ಕೋವಿಡ್ ಸೆಂಟರ್, ಕ್ಯಾತ್ಸಂದ್ರದ ಕೋವಿಡ್ ಸೆಂಟರ್ ಹಾಗು ಕೋಡಿ ಮುದ್ದನಹಳ್ಳಿಯ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 600 ರೋಗಿಗಳಿಗೆ ತಲಾ ತೂಕವಿರುವ ಬಾದಾಮಿ, ಗೋಡಂಬಿ,ದ್ರಾಕ್ಷಿ ಹಾಗೂ ವಾಲ್‍ನಟ್ ಡ್ರೈಪ್ರೂಟ್ಸ್‍ಗಳನ್ನು ಒಳಗೊಂಡ ಪಟ್ಟಣಗಳನ್ನು ವಿತರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶಗೌಡ ಎರಡನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರಮೋದಿ ಅವರು ಅಧಿಕಾರ ಸ್ವೀಕರಿಸಿ, ಮೇ.30ಕ್ಕೆ ಎರಡು ವರ್ಷ ತುಂಬುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅದರ ಭಾಗವಾಗಿ ಯುವಮೋರ್ಚಾದಿಂದ ಕೋವಿಡ್-19 ರೋಗಿಗಳಿಗೆ ಅತೀ ಅವಶ್ಯಕವಾಗಿರುವ, ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಡ್ರೈಪ್ರೂಟ್ಸ್‍ಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ.ಇದೇ ರೀತಿ ಕೋವಿಡ್-19 ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷ ಹಮ್ಮಿಕೊಳ್ಳಲಿದೆ ಎಂದರು
ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಅರಕೆರೆ ರವೀಶ್ ಮಾತನಾಡಿ,ಕೋರೋನ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಆತ್ಮಸೈರ್ಯ ತುಂಬುವ ನಿಟ್ಟಿನಲ್ಲಿ ಅವರಿಗೆ ಅತಿ ಅಗತ್ಯವಾಗಿರುವ ಡ್ರೈಪ್ರೂಟ್ಸ್‍ಗಳನ್ನು ವಿತರಿಸಲಾಗುತ್ತಿದೆ.ಅಲ್ಲದೆ ಯುವಮೋರ್ಚಾ ವತಿಯಿಂದ ಗ್ರಾಮೀಣ ಭಾಗದಲ್ಲಿ ಕೋರೋನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ.ನಗರದ ಕೇಂದ್ರೀಯ ವಿದ್ಯಾಲಯದ ಬಳಿ ಇರುವ ಹಕ್ಕಿಪಿಕ್ಕಿ ಜನಾಂಗಕ್ಕೆ ಕೋರೋನ ರೋಗದ ಬಗ್ಗೆ ಅರಿವು ಮೂಡಿಸಿ,ಅವರು ಕೋವಿಡ್ ಟೆಸ್ಟ್‍ಗೆ ಒಳಪಡುವಂತೆ ಮನವೊಲಿಸಿ, ಸುಮಾರು 60 ಕುಟುಂಬಗಳ 82 ಜನರಿಗೆ ಕೋವಿಡ್ ವಿರುದ್ದದ ಲಸಿಕೆ ಹಾಕಿಸಲಾಗಿದೆ.ಅಲ್ಲದೆ ಅಗತ್ಯವಿರುವವರಿಗೆ ದಿನಸಿ ಕಿಟ್ ನೀಡಲಾಗುತ್ತಿದೆ.ಸರಕಾರ ಒಂದು ವೇಳೆ ಲಾಕ್‍ಡೌನ್ ಮುಂದುವರೆಸಿದರೆ,ಅಗತ್ಯವಿರುವ ಕುಟುಂಬಗಳಿಗೆ, ಅದರಲ್ಲಿ ಯೂ ಕುಲಕಸುಬು ನಂಬಿ ಬದುಕುತ್ತಿರುವ ಸವಿತಾ ಸಮಾಜ,ಮಡಿವಾಳ ಸಮಾಜದ ಕಾರ್ಮಿಕರಿಗೆ ದಿನಸಿ ಪದಾರ್ಥಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದರು.