ತುಮಕೂರು:

     ಕೋವಿಡ್ ಕೇರ್ ಸೆಂಟರ್‍ನಲ್ಲಿ ಕೊರೋನಾ ಸೋಂಕು ತಗುಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಾಧ್ಯವಾದಷ್ಟು ಬೇಗ ಕೊರೋನಾ ಸೋಂಕು ನಿವಾರಣೆಯಾಗಿ ಮನೆಗಳಿಗೆ ತೆರಳಲಿ ಹಾಗೂ ಗ್ರಾಮದಲ್ಲಿ ಇತರರಿಗೆ ಸೋಂಕು ತಗುಲದೆ ಇರಲಿ ಅಂತಾ ಜಿಲ್ಲಾ ಆರೋಗ್ಯ ಇಲಾಖೆ ಆಯಾ ತಾಲೂಕುಗಳಲ್ಲಿ ಕೊವಿಡ್ ಕೇರ್ ಸೆಂಟರ್‍ಗಳನ್ನು ತೆರದಿದೆ. ಪಾಸಿಟಿವ್ ಬಂದವರನ್ನು ಕೂಡಲೇ ಕೊವಿಡ್ ಕೇರ್ ಸೆಂಟರ್‍ಗೆ ದಾಖಲಿಸಿ ಚಿಕಿತ್ಸೆ ನೀಡುವ ಜೊತೆಗೆ ಮೂರು ಹೊತ್ತು ಆಹಾರ, ಬಿಸಿ ನೀರು ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತದೆ. ಈ ನಡುವೆ ಸೋಂಕಿತರು ಕೊವಿಡ್ ಕೇರ್ ಸೆಂಟರ್‍ನಲ್ಲಿ ಯಾರ ಭಯವಿಲ್ಲದೆ ಇಸ್ಪೀಟ್ ಆಟವನ್ನು ಶುರು ಮಾಡಿದ್ದಾರೆ.

     ಸೋಂಕು ನಿವಾರಿಸಿಕೊಂಡು ಸಾಧ್ಯವಾದಷ್ಟು ಬೇಗ ತಮ್ಮ ಊರಿಗೆ ತೆರಳಬೇಕಾಗಿರುವ ಸೋಂಕಿತರು, ಸೋಂಕು ಬಂದಿರುವುದನ್ನು ಮರೆತು ಕೊವಿಡ್ ಕೇರ್ ಸೆಂಟರ್‍ನಲ್ಲಿ ಜೂಜಾಟ ಆಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಇರುವ ಕೊವಿಡ್ ಕೇರ್ ಸೆಂಟರ್‍ನಲ್ಲಿ ಜೂಜಾಟ ಆಡಿದ್ದು, ಪ್ರತ್ಯೇಕವಾಗಿ ಎರಡು ಗುಂಪುಗಳನ್ನು ಮಾಡಿಕೊಂಡು ಜೂಜಾಟ ಆಡಿದ್ದಾರೆ. ಜೂಜಾಟ ಆಡುವ ವಿಡಿಯೋ ವೈರಲ್ ಆಗಿದ್ದು, 100, 200 ರಿಂದ 500 ರೂ.ಗಳ ವರೆಗೆ ಜೂಜಾಟ ಆಡಿದ್ದಾರೆ. ಸೋಂಕಿತರು ಪ್ರತಿದಿನ ಜೂಜಾಟ ಆಡುತ್ತಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಕೊವಿಡ್ ಕೇರ್ ಸೆಂಟರ್‍ನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೋಂಕಿತರು ರಾಜಾರೋಷವಾಗಿ ಜೂಜಾಟ ಆಡುತ್ತಿದ್ದಾರೆ.ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ನಾಗೇಂದ್ರಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹಾಗೂ ನಮ್ಮ ಗಮನಕ್ಕೂ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಚಿಕ್ಕನಾಯಕನಹಳ್ಳಿ ಪೆÇಲೀಸರಿಗೆ ಸೂಚಿಸಲಾಗಿದೆ ಎಂದಿದ್ದಾರೆ. ಕೊರೋನಾ ಸೋಂಕು ನಿವಾರಣೆಯಾಗಿ ಕೊವಿಡ್ ಕೇರ್ ಸೆಂಟರ್‍ನಿಂದ ಬಿಡುಗಡೆಯಾದ ಬಳಿಕ ಜೂಜಾಟದಲ್ಲಿ ಭಾಗಿಯಾಗಿದ್ದ ಸೋಂಕಿತರು ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

(Visited 4 times, 1 visits today)