ತುಮಕೂರು:

     ನಗರದ ಕುಡಿಯುವ ನೀರಿನ ಜಲ ಸಂಗ್ರಹಾರ ಬುಗಡನಹಳ್ಳಿ ಕೆರೆಗೆ ತಡ ರಾತ್ರಿ ಸುಮಾರು 12 ಗಂಟೆಗೆ ಗೋರೂರು ಜಲಶಾಯದಿಂದ ಹೇಮಾವತಿ ನೀರು ತಲುಪಿದೆ. 2000 ಕ್ಯೂಸೆಕ್ಸ್ ಗೋರೂರು ಜಲಶಾಯದಿಂದ ನೀರು ಹರಿದು ಬಾಗೂರು ನವಿಲೆ ಗೇಟ್ ನಿಂದ 1100 ಕ್ಯೂಸೆಕ್ಸ್ ಹೊರ ಹರಿವು ಇದ್ದು ಬುಗುಡನಹಳ್ಳಿ ಕೆರೆಯ ಕಾಲುವೆಗೆ ಸರಾಸರಿ 400 ರಿಂದ 500 ಕ್ಯೂಸೆಕ್ಸ್ ನಷ್ಟು ನೀರಿನ ಹರಿವು ಪ್ರಮಾಣದಲ್ಲಿ ಬುಗುಡನಹಳ್ಳಿ ಕೆರೆಗೆ ನೀರು ತಲುಪಿದೆ.

      ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಈ ನೀರನ್ನು ಬಳಸಿಕೊಳ್ಳಬಹುದಾಗಿದೆ. ಇನ್ನೇನು ಬುಗುಡನಹಳ್ಳಿಯ ಕೆರೆ ಬರಿದಾಗುವ ಕಾಲ ಸನ್ನಿಹಿತ ಸಮಯದಲ್ಲಿ ಹೇಮಾವತಿ ನೀರನ್ನು ಬಿಟ್ಟಿರುವುದು ತುಮಕೂರು ನಗರದ ನಾಗರೀಕರು ನಿಟ್ಟುಸಿರು ಬಿಡುವಂತಾಗಿದೆ. ಇಲ್ಲವಾದಲ್ಲಿ ಬೊರೆವೆಲ್ ಆಶ್ರಯಿಸಿ, ವಾಟರ್ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ನೀರು ನೀಡುವಂತಹ ಪರಿಸ್ಥಿತಿ ತುಮಕೂರು ಮಹಾನಗರ ಪಾಲಿಕೆಯದಾಗುತ್ತಿತ್ತು.

ಶಾಸಕರ ತಂಡ ಭೇಟಿ:

      ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದ ಹಿನ್ನಲೆಯಲ್ಲಿ ತುಮಕೂರು ನಗರದ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ರವರ ನೇತೃತ್ವದಲ್ಲಿ ತುಮಕೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್, ವಿರೋಧ ಪಕ್ಷದ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಬುಗಡನಹಳ್ಳಿ ಕೆರೆಗೆ ಭೇಟಿ ನೀಡಿದ್ದಾರೆ.

(Visited 24 times, 1 visits today)