ತುಮಕೂರು: 

      ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಡಬ್ಬಿಂಗ್ ಅಗತ್ಯ. ಈ ತಂತ್ರಜ್ಞಾನ ಅಳವಡಿಕೆಯಿಂದ ಚಿತ್ರನಿರ್ಮಾಣ ವೆಚ್ಚ ಮತ್ತು ಕಲಾವಿದರ ಬಳಕೆ ಕಡಿಮೆಯಾದರೂ ಪ್ರಾದೇಶಿಕ ಭಾಷೆಗಳ ಗುಣಮಟ್ಟವನ್ನು ಅಂತರಾಷ್ಟ್ರೀ ಮಟ್ಟಕ್ಕೆ ಕೊಂಡೋಯ್ಯವ ಅವಕಾಶಗಳು ಹೆಚ್ಚಾಗುತ್ತವೆ ಎಂದು ಕನ್ನಡ ಮತ್ತು ಮರಾಠಿ ಚಲನಚಿತ್ರ ನಿರ್ದೇಶಕ ಸುಧೀರ್ ಅತ್ತಾವರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಏರ್ಪಡಿಸಲಾಗಿರುವ ಒಂದು ವಾರದ ವಿಶೇಷ ಉಪನ್ಯಾಸ ಸರಣಿ ಮಾಲಿಕೆ ಇಂದಿನ ವೆಬಿನಾರ್‍ನಲ್ಲಿ “ಚಿತ್ರರಂಗದ ಇತಿಹಾಸ ಮತ್ತು ಅಭಿವೃದ್ಧಿ” ಕುರಿತು ಮುಂಬೈನಿಂದ ವಿಶೇಷ ಉಪನ್ಯಾಸ ನೀಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದರು.

        ಅದೇ ರೀತಿ ಕನ್ನಡ ಚಿತ್ರರಂಗಕ್ಕೆ ಗುಬ್ಬಿ ವೀರಣ್ಣನವರ ಕೊಡುಗೆಯೂ ಅಪಾರವಾದುದು ಎಂದು ಅವರು ಸಿನಿಮಾ ಇತಿಹಾಸದಲ್ಲಿ ತುಮಕೂರು ಜಿಲ್ಲೆಯ ಪಾತ್ರವನ್ನು ಮೆಲುಕು ಹಾಕಿದರು. ಅμÉ್ಟೀ ಅಲ್ಲದೆ ಚಿತ್ರರಂಗದ ಆಳ, ಚಲನಚಿತ್ರಗಳ ಉದಯ,ಇತಿಹಾಸ, ಪ್ರಸ್ತುತ ಸಿನಿಮಾ ರಂಗದ ಸ್ಥಿತಿಗತಿಗಳು ವಿವರಿಸಿದ ಸುಧೀರ್ ಅತ್ತಾವರ್ ಸಿನಿಮಾ ನಿರ್ಮಾಣದ ಹಿಂದಿನ ಕಾಲದ ಪರಿಸ್ಥಿತಿಗಳೆಲ್ಲವನ್ನು ಪ್ರಸ್ತುತ ಸಂದರ್ಭಕ್ಕೆ ಒಲೈಸಿ ಕೂಲಂಕುಷವಾಗಿ ವಿದ್ಯಾರ್ಥಿಗಳಿಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿವರಿಸಿದರು.

      ಸಂವಾದ: ಆನ್‍ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಪಕರುಗಳ ಪ್ರಶ್ನೆಗೆ ಉತ್ತರಿಸುವ ಮೂಲಕ ಅನೇಕ ಮಾಹಿತಿಯನ್ನು ಸುಧೀರ್ ಅತ್ತಾವರ್ ನೀಡಿದರು. ಆನ್ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಶ್ವೇತಾ ಎಂ.ಪಿ, ಜ್ಯೋತಿ ಸಿ, ಮನೋಜ ಕುಮಾರಿ, ವಿಜಯ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಲೋಕೇಶ್ ಎಸ್.ಕೆ, ಸುಂಕಣ್ಣ ಟಿ, ಹರಿಪ್ರಸಾದ್iÁ್ರಜ್ಯದ ವಿವಿಧ ಕಡೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

(Visited 9 times, 1 visits today)