ಹುಳಿಯಾರು:

      ಶೆಟ್ಟಿಕೆರೆ ಗ್ರಾಮದಲ್ಲಿ ಸಾಕಷ್ಟು ಸಿಸ್ಟನ್‍ಗಳಿದ್ದು ಅದನ್ನು ಕಳೆದ ಮೂರು ವರ್ಷಗಳ ಹಿಂದಿನಿಂದಲೂ ಬಳಸದೆ ಅದರ ಮೇಲೆ ಗಿಡ ಗಂಟೆಗಲು ಬೆಳೆದು ನಿಂತಿವೆ.

      2012 ರಿಂದ 2017 ರವರೆಗೆ ಸತತವಾಗಿ ಬರಗಾಲದ ಹಿನ್ನಲೆಯಲ್ಲಿ ಅಭಾವ ಪರಿಹಾರ, ತುರ್ತುನಿಧಿ, ಗ್ರಾ.ಪಂ, ತಾ.ಪಂ, ಜಿ.ಪಂ, ಅನೇಕ ಯೋಜನೆಗಳನ್ನು ಶೆಟ್ಟಿಕೆರೆಯಲ್ಲಿ ಅನುಷ್ಠಾನ ಮಾಡಲಾಗಿತ್ತು, ಅತಿಯಾದ ಬರದ ಹಿನ್ನಲೆಯಲ್ಲಿ ನೀರಿಗೆ ಅಭಾವ ಉಂಟಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಬೋರೆವೆಲ್‍ಗಳು ನಿಂತು ಹೋದ ಪರಿಣಾಮ ಎಲ್ಲಾ ಸಿಸ್ಟನ್‍ಗಳು ಬಳಕೆಗೆ ಬಾರದಂತೆ ಆಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಹಾವು ಇನ್ನಿತರ ಕ್ರಿಮಿ ಕೀಟಗಳಿಗೆ ವಾಸ ತಾಣವಾಗಿರುವ ಸಿಸ್ಟನ್‍ಗಳನ್ನು ಸ್ವಚ್ಛ ಗೊಳಿಸಿ ಸದ್ಬಳಕೆ ಮಾಡಿಕೊಳ್ಳಲು ಗ್ರಾಪಂ ನವರು ಮುಂದಾಗಬೇಕಿದೆ. ಸದ್ಯ ಶೆಟ್ಟಿಕೆರೆ ಕೆರೆ ತುಂಬಿದ್ದು, ಅಂತರ್ಜಲ ವೃದ್ಧಿ ಆಗಿದ್ದು ಸುಮಾರು 100 ರಿಂದ 200 ಅಡಿ ಆಳದಲ್ಲಿ ನೀರು ಸಿಗುತ್ತಿರುದರಿಂದ ಎಲ್ಲ ಬೋರ್‍ಗಳು ಚಾಲ್ತಿಯಲ್ಲಿವೆ.

      ಈ ಸಂದರ್ಭದಲ್ಲಿ ಗ್ರಾ.ಪಂ.ರವರು ಶೆಟ್ಟಿಕೆರೆಯ ಎಲ್ಲ ಸಿಸ್ಟನ್‍ಗಳನ್ನು ಸ್ವಚ್ಛ ಮಾಡಿಸಿ, ನೀರು ಬಿಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಶೆಟ್ಟಿಕೆರೆ ತೇಜು ಕೋರಿದ್ದಾರೆ.

(Visited 3 times, 1 visits today)