ತುಮಕೂರು:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಕೋನ ವಂಶಿಕೃಷ್ಣರವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಎರಡು ವರ್ಷಗಳಿಗೂ ಹೆಚ್ಚು ಕಾಲ ಪ್ರಾಮಾಣಿಕವಾಗಿ ಹಾಗೂ ದಕ್ಷ ಆಡಳಿತಗಾರರಾಗಿ ಕಾರ್ಯ ನಿರ್ವಹಿಸಿದ್ದ ಇವರು, ಇವರ ಅವಧಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಹಲವಾರು ಹೊಸ ಯೋಜನೆಗಳು ಮತ್ತು ವಿನೂತನ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದ್ದು, ಇವರ ವಿಶೇಷ ಕಾರ್ಯಕ್ರಮಗಳು ಜಿಲ್ಲೆಗೆ ಉತ್ತಮ ಕೆಲಸಗಳಾಗಿವೆ ಎಂಬುದು ಸಾರ್ವಜನಿಕರ ಮೆಚ್ಚುಗೆ ಆಗಿದೆ. ಭ್ರಷ್ಟತೆಯ ಕರಿ ನೆರಳು ತಮ್ಮ ಮೇಲೆ ಬೀಳದ ಹಾಗೆ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದು, ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಆತ್ಮೀಯವಾದ ಬಾಂಧÀವ್ಯ ಹೊಂದಿದ್ದರು. ಕಳೆದ ವರ್ಷ ಬಂದ ಕೋವಿಡ್‍ನ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದ್ದರು. ಹಾಗೂ ತಮ್ಮ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕೊರೋನಾ ಸೋಂಕಿಗೆ ಬಳಲುತ್ತಿದ್ದ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅವರು ನೀಡಿದಂತಹ ಆತ್ಮಸ್ಥೈರ್ಯ ಇಲಾಖೆ ಮೆಚ್ಚುವಂತದಾಗಿತ್ತು. ಹೊಸ ಹೊಸ ಯೋಜನೆಗಳ ಜೊತೆಗೆ ಹೊಸ ಆವಿಷ್ಕಾರಗಳಿಗೆ ಮುನ್ನುಡಿ ಬರೆದಿದ್ದು ಒಂದು ಕಡೆಯಾದರೆ ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಲಿಂಗೈಕ್ಯ ಸಂದರ್ಭದಲ್ಲಿ ಅವರು ಕಾರ್ಯನಿರ್ವಹಿಸಿದ ರೀತಿ ಇಲಾಖೆಯು ಸೇರಿದಂತೆ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಉತ್ತಮ ಅಧಿಕಾರಿದ್ದ ಡಾ.ಕೋನ ವಂಶಿಕೃಷ್ಣರವರ ಸೇವೆ ತುಮಕೂರು ಜಿಲ್ಲೆಯ ಜನತೆಗೆ ಮತ್ತೊಮ್ಮೆ ದೊರೆಯಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತುಮಕೂರು ನಗರದ ನೂತನ ಪೆÇಲೀಸ್ ವರಿಷ್ಠಾಧಿಕಾರಿಯಾಗಿ ರಾಹುಲ್ ಕುಮಾರ್ ಶಹಾಪುರವಾಡ್ ರವರು ನೇಮಕಗೊಂಡಿದ್ದಾರೆ.