ತುಮಕೂರು :
ತಾಲ್ಲೂಕಿನ ಗೂಳೂರು ಹೋಬಳಿ, ಕೆ.ಪಾಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮನೆಗಳಿಗೆ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದ, ಮಾಜಿ ಶಾಸಕ ಹಾಗೂ ಬಿ.ಜೆ.ಪಿ. ಜಿಲ್ಲಾದ್ಯಕ್ಷ ಬಿ.ಸುರೇಶ್ ಗೌಡರು, ಕೋವಿಡ್ನಿಂದ ಆಕಾಲಿಕ ಮರಣ ಹೊಂದಿದ ಲೋಕೇಶ್(ಕೋಳಿ) ಕುಟುಂಬಕ್ಕೆ 25000 ರೂ ಮತ್ತು ಅವರ ತಮ್ಮನಾದ ಮೃತ ರಾಮಚಂದ್ರ ಕುಟುಂಬಕ್ಕೆ 25000 ರೂ, ದಲಿತ ಮುಖಂಡರಾದ ದಿ|| ನಾರಾಯಣ್ ಮತ್ತು ಸಾರಂಗಿರಾಜು ಕುಟುಂಬಕ್ಕೆ ತಲಾ 25000 ರೂ, ಕಿತ್ತಗಾನಹಳ್ಳಿ ಗ್ರಾಮದ ಮುನಿಸ್ವಾಮಯ್ಯ ರವರ ಕಾಲು ಶಸ್ತ್ರ ಚಿಕಿತ್ಸೆಗೆ ಹಾಗೂ ಪಾಶ್ರ್ವವಾಯು ಪೀಡಿತ ನರಸಿಂಹರಾಜು ರವರಿಗೆ ಧನ ಸಹಾಯ ಮಾಡಿ ಎಲ್ಲಾ ರಾಜಕರಣಿಗಳಿಗೂ ಅಗ್ರ ಮೇಲ್ಪಂಕ್ತಿ ಹಾಕಿ ಕೊಟ್ಟರು, ನಿಧನರಾದ ಕುಟುಂಬದ ಸದಸ್ಯನ ಸ್ಥಾನವನ್ನು ಯಾರು ತುಂಬಲಾರರು, ನೀವು ದೃತಿಗೆಡದೆ ದೈರ್ಯವಾಗಿರಿ ನಿಮ್ಮ ಕುಟುಂಬಗಳಿಗೆ ಹೆಗಲಾಗಿರುತ್ತೇನೆ ಎಂದರು, ಮತ್ತು ಮೃತ ಜೀವಗಳ ಆತ್ಮಗಳಿಗೆ ಸದ್ಗತಿ ಸಿಗಲಿ ಹಾಗೂ ಕುಟುಂಬದ ಸದಸ್ಯರಿಗೆ ಈ ಅಕಾಲಿಕ ಮರಣದ ನೋವನ್ನು ಮೀರಿ ಬದುಕು ಕಟ್ಟಿಕೊಳ್ಳುವ ಶಕ್ತಿ, ಚೈತನ್ಯ, ಎಲ್ಲಾ ಕುಟುಂಬಳಿಗೆ ದೊರಕಲಿ ಎಂದು ಪ್ರಾರ್ಥಿಸಿದರು
ಈ ಸಂದರ್ಭದಲ್ಲಿ ಪ್ರೆಂಟ್ ಲೈನ್ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೊರೊನ ಬಾಧಿತ ಕುಟುಂಬಳಿಗೆ ಆಹಾರ ಕಿಟ್ ಗಳನ್ನು ಬಿ.ಸುರೇಶ್ ಗೌಡ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶಂಕರಣ್ಣ, ಹೊನ್ನುಡಿಕೆ ಜಿಲ್ಲಾಪಂಚಾಯಿತಿ ಮುಖಂಡರಾದ ಸಿದ್ದೇಗೌಡ, ಗೂಳೂರು ಜಿಲ್ಲಾಪಂಚಾಯಿತಿ ಮುಖಂಡರಾದ ಶಿವಕುಮಾರ್, ತಾ.ಪಂ ಸದಸ್ಯರಾದ ಜಯಲಕ್ಷ್ಮಮ್ಮ ಅಶೋಕ್, ಗ್ರಾ.ಪಂ, ಅಧ್ಯಕ್ಷರಾದ ವನಜಾಕ್ಷಮ್ಮಲಕ್ಷ್ಮಯ್ಯ, ಉಪಾಧ್ಯಕ್ಷರಾದ ಜಯ್ಯಮ್ಮ ನಾಗರಾಜು, ಗ್ರಾ.ಪಂ ಸದಸ್ಯರುಗಳಾದ ಕಲ್ಪನ, ಭದ್ರೇಶ್, ಸಯ್ಯದ್ನೂರುಲ್ಲಾ, ವೆಂಕಟೇಶ್, ಕವಿತಾಚಂದ್ರಶೇಖರ್, ಸೋಮಶೇಖರ್, ಪುಟ್ಟಮ್ಮ, ನಾಗರಾಜು, ಗಂಗಣ್ಣ ನರಸಿಂಹಮೂರ್ತಿ, ರೇಣುಕಮ್ಮ, ಗಿರೀಶ್, ಮುಂತಾದ ಮುಖಂಡರು ಉಪಸ್ಥಿತರಿದ್ದರು.