ಮಧುಗಿರಿ :
ತುಮುಲ್ ವತಿಯಿಂದ ತಾಲೂಕಿನ ರೈತರಿಗೆ ಸಬ್ಸಿಡಿ ದರದಲ್ಲಿ ಮೇವಿನ ಬೀಜ ವಿತರಿಸಲಾಗುತ್ತಿದ್ದು, ಹಾಲು ಉತ್ಪಾದಕ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ತುಮುಲ್ ಉಪಕೇಂದ್ರದಲ್ಲಿ ಮಂಗಳವಾರ ಮೇವಿನ ಬೀಜ ವಿತರಿಸಿ ಮಾತನಾಡಿದ ಅವರು ಹಾಲು ಉತ್ಪಾದಕರಿಗೆ ಹಸಿರು ಮೇವು ಬೆಳೆದುಕೊಳ್ಳಲು ಉತ್ತೇಜನ ನೀಡಲು ಮತ್ತು ಗುಣಮಟ್ಟದ ಹಾಲು ಶೇಖರಣೆ ಮಾಡುವ ಉದ್ದೇಶದಿಂದ 153 ಸಂಘಗಳ 8900 ಹಾಲು ಉತ್ಪಾದಕ ಸದಸ್ಯರಿಗೆ 70 ಟನ್ ಮೇವಿನ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ತಾಲೂಕಿನ ಹಾಲು ಉತ್ಪಾದಕ ರೈತರಿಗೆ 56 ಸಾವಿರ ಕೆ.ಜಿ ಸೌಥ್ ಆಫ್ರಿಕಾ ಬಿತ್ತನೆ ಮೇವಿನ ವಿತರಿಸಲಾಗುತ್ತಿದ್ದು, ಇದಕ್ಕೆ ಕೆ.ಜಿ ಗೆ 35 ರೂಗಳು ಮೂಲ ಧರವಿದ್ದು, ಒಕ್ಕೂಟದ ವತಿಯಿಂದ 17. 50 ರೂಗಳ ಸಬ್ಸಿಡಿ ದೊರೆಯಲಿದೆ. ಹಾಲು ಉತ್ಪಾದಕರು 17. 50 ರೂಗಳನ್ನು ಮಾತ್ರ ಬರಿಸಬೇಕು. 10 ಸಾವಿರ ಕೆ.ಜಿ, ಎಸ್.ಎಸ್.ಜಿ ಮಲ್ಟಿ ಕಟ್ ಮೇವಿನ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕೆ ಕೆ.ಜಿ ಗೆ 46 ರೂಗಳು ಮೂಲ ಧರವಿದ್ದು, ಒಕ್ಕೂಟ 23 ರೂಗಳ ಸಬ್ಸಿಡಿ ನೀಡಲಿದೆ. ಇನ್ನು 3500 ಕೆ.ಜಿ ಅಲಸಂದೆ ಕಾಳು ಬೀಜ ವಿತರಿಸಲಾಗುತ್ತಿದ್ದು, ಮೂಲ ಧರ ಕೆ.ಜಿ ಗೆ 72 ರೂಗಳು, ತುಮುಲ್ ವತಿಯಿಂದ 36 ರೂಗಳ ಸಬ್ಸಿಡಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.