ಕೊರಟಗೆರೆ:
ತೋಟಗಾರಿಕೆ ಕ್ಷೇತ್ರ, ಅರಣ್ಯ ಪ್ರದೇಶ, ಸರಕಾರಿ ಗೋಮಾಳ ಮತ್ತು ಸರಕಾರಿ ಕೆರೆಕಟ್ಟೆ ರಾತ್ರೋರಾತ್ರಿ ನೆಲಸಮ. ಕೊರಟಗೆರೆ ಕ್ಷೇತ್ರದ ಗಡಿಭಾಗದ ಸರಕಾರಿ ಜಮೀನುಗಳಿಗೆ ಸರಕಾರದ ಭದ್ರತೆಯೇ ಮರೀಚಿಕೆ. ದಾಖಲೆಯೇ ಇಲ್ಲದ ರೈತರ ಜಮೀನು ಖರೀದಿಸಿ ಅಕ್ಕಪಕ್ಕದ ಸರಕಾರಿ ಜಮೀನು ಸಕ್ರಮ ಮಾಡಿಕೊಳ್ಳಲು ಮುಂದಾಗಿರುವ ಕೇರಳ ಭೂಗಳ್ಳರಿಗೆ ರಾಜ್ಯ ಸರಕಾರ ಮತ್ತು ಜಿಲ್ಲಾಧಿಕಾರಿ ಕಡಿವಾಣ ಹಾಕಿಬೇಕಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗಡಿಭಾಗವಾದ ಗಂಗೇನಹಳ್ಳಿ ಅರಣ್ಯ ಪ್ರದೇಶ ಮತ್ತು ದೊಡ್ಡಸಾಗ್ಗೆರೆ ತೋಟಗಾರಿಕೆ ಕ್ಷೇತ್ರದ ಅರ್ಧಭಾಗ ಈಗಾಗಲೇ ಭೂಗಳ್ಳರ ಪಾಲಾಗಿದೆ. ಕಂದಾಯ, ಸಾಮಾಜಿಕ ಅಥವಾ ವಲಯ ಅರಣ್ಯ ಅಧಿಕಾರಿಗಳ ತಂಡ ತೆರವಿಗೆ ಮುಂದಾದರೇ ರಾಜ್ಯಸರಕಾರ, ಸಚಿವ ಮತ್ತು ಸಂಸದರಿಂದ ದೂರವಾಣಿ ಕರೆ ಮಾಡಿಸಿ ವರ್ಗಾವಣೆ ಮಾಡಿಸುವ ಬೆದರಿಕೆಯ ಕೆಲಸ ಸರ್ವೆ ಸಾಮಾನ್ಯವಾಗಿದೆ.
ಕೊರಟಗೆರೆ ಕ್ಷೇತ್ರದ ದೊಡ್ಡಸಾಗ್ಗೆರೆ, ಗಂಗೇನಹಳ್ಳಿ, ಕಾಶಾಪುರ, ತೋವಿನಕೆರೆ, ಕೋಳಾಲ ಗಡಿಭಾಗದ ನೂರಾರು ಎಕರೇ ಸರಕಾರಿ ಗೋಮಾಳದ ಜಮೀನು ಕೇರಳ, ತಮಿಳುನಾಡು ಮತ್ತು ಆಂದ್ರಪ್ರದೇಶ ಮೂಲದ ವಾಣಿಜ್ಯ ಉದ್ಯಮಿಗಳ ಪಾಲಾಗಿವೆ. ದಾಖಲೆಯೇ ಇಲ್ಲದಿರುವ ರೈತಾಪಿವರ್ಗ ಸ್ವಾಧೀನದ ಜಮೀನಿಗೆ ಕೋಟ್ಯಾಂತರ ರೂ ಬೆಲೆಕಟ್ಟಿ ಖರೀದಿಸುವ ಪ್ರಯತ್ನ ನಿರಂತರವಾಗಿ ಎಗ್ಗೀಲ್ಲದೇ ನಡೆಯುತ್ತೀದೆ. ಜಿಲ್ಲಾಡಳಿತ, ಕಂದಾಯ ಸಚಿವ ಮತ್ತು ರಾಜ್ಯ ಸರಕಾರ ಭೂಮಾಫಿಯ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.