ತುಮಕೂರು:

ಊರ್ಡಿಗೆರೆ ಹೋಬಳಿ, ಅರೆಗುಜ್ಜನಹಳ್ಳ್ಳಿ ಗ್ರಾಮ ಪಂಚಾಯಿತಿ, ಸೀತಕಲ್ಲು ಗ್ರಾಮ ಪಂಚಾಯಿತಿ, ಊರ್ಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ವೈದ್ಯಕೀಯ ಸಿಬ್ಬಂದಿ, ಕೊರೋನ ಸೋಂಕಿತ ಕುಟುಂಬಳಿಗೆ ಹಾಗೂ ಆಟೋ ಚಾಲಕರಿಗೆ ಉಚಿತವಾಗಿ ಆಹಾರ ದಾನ್ಯಗಳ ಕಿಟ್‍ಗಳನ್ನು ಜಿಲ್ಲಾದ್ಯಕ್ಷರಾದ ಬಿ.ಸುರೇಶ್ ಗೌಡ ವಿತರಿಸಿ ಅವರ ಸೇವೆಯನ್ನು ಶ್ಲಾಘೀಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಬಿ.ಸುರೇಶ್ ಗೌಡ ಇಡೀ ದೇಶದಲ್ಲೇ ಮೊದಲ ಬಾರಿಗೆ ಕೊವಿಡ್-19 ಸೋಕಿಂನಿಂದ ಮೃತಪಟ್ಟ ಬಿಪಿಎಲ್ ಕುಟುಂಬ ವರ್ಗದ ಒಬ್ಬ ಸದಸ್ಯರಿಗೆ 1 ಲಕ್ಷ ರೂಪಾಯಿಯ ಪರಿಹಾರವನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಘೋಷಣೆ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ಇದರಿಂದ ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಮೃತ ಪಟ್ಟರೆ ಅಂತಹ ಕುಟುಂಬಗಳ ಒಬ್ಬರಿಗೆ ಅನ್ವಯವಾಗುವಂತೆ 1 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಬಡವರ ಪರವಿದೆ, ಅದೇ ರೀತಿ ಬಡ ಜನತೆಗೆ ಇದು ಅತ್ಯಂತ ಸಹಾಯಕವಾಗಲಿದೆ, ರಾಜ್ಯದ ಸುಮಾರು 25 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಇದರಿಂದ ನೆರವು ದೊರೆಯಲಿದೆ ಎಂದು ತಿಳಿಸುತ್ತ, ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ದಾವಣಗೆರೆ ತುಮಕೂರು ವಿಭಾಗ ಸಹ ಪ್ರಭಾರಿ ಲಕ್ಷ್ಮೀಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ವೈ.ಹೆಚ್ ಹುಚ್ಚಯ್ಯ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಓಂ ನಮೋ ನಾರಾಯಣ್, ಗ್ರಾ.ಪಂ, ತಾ.ಪಂ ಸದಸ್ಯರಾದ ರವಿ.ಎಸ್, ಅಲ್ಪ ಸಂ ಅಧ್ಯಕ್ಷರುಗಳಾದ ಗಂಗಣ್ಣ, ಗಾಯಿತ್ರಿ ನಟರಾಜು, ಸಿದ್ದಲಿಂಗಪ್ಪ. ಉಪಾಧ್ಯಕ್ಷರಾದ ಕೆಂಪಸಿದ್ದಣ್ಣ, ರಮ್ಯರಾಜಣ್ಣ ಗ್ರಾ.ಪಂ ಸದಸ್ಯರುಗಳಾದ, ರೇಖಾಚಿಕ್ಕಿರಪ್ಪ, ಸಹನಾ ರಾಮಚಂದ್ರಪ್ಪ, ನೇತ್ರಾವತಿ, ನಾಗರಾಜು, ರೂಪದೇವಿ, ನಾಗರಾಜು, ಭಾಗ್ಯಮ್ಮ, ನರಸಿಂಹಮೂರ್ತಿ, ಸುಬ್ಬಣ್ಣ, ಮಂಜುನಾಥ್, ಶ್ರೀಧರ್, ಪರಮೇಶ್ವರಯ್ಯ, ಕುಮಾರ್, ಮದನ್, ಮಾರುತಿ, ಕರಿಯಪ್ಪ, ಕರಿರಂಗಯ್ಯ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

(Visited 11 times, 1 visits today)