ತುಮಕೂರು :
ರಾಜ್ಯಾದ್ಯಂತ ಕೈಗೊಂಡಿರುವ ಕೋವಿಡ್ ಲಸಿಕಾಭಿಯಾನದಡಿ ಜಿಲ್ಲೆಯಲ್ಲಿಯೂ ಶೇ.100ರಷ್ಟು ಯಶಸ್ವಿಯಾಗಲು ಎಲ್ಲರೂ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಈ ಲಸಿಕಾಭಿಯಾನದಲ್ಲಿ ನಿಗಧಿತ ಗುರಿಗಿಂತ ಕಡಿಮೆ ಲಸಿಕಾಕರಣವಾಗಬಾರದು ಎಂದು ನಿರ್ದೇಶಿಸಿದರು.
ಲಭ್ಯವಿರುವ ಲಸಿಕೆಯನ್ನು ಬಳಸಿಕೊಂಡು ಸರ್ಕಾರದ ಮಾರ್ಗಸೂಚಿಯಂತೆ ಲಸಿಕಾಭಿಯಾನದಲ್ಲಿ ಶೇ.100ರಷ್ಟು ಸಾಧನೆ ಮಾಡಲು ಪಣ ತೊಡಬೇಕು. ಈಗಾಗಲೇ ಲಸಿಕಾಕರಣ ಕಾರ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಅಭಿಯಾನ ಯಶಸ್ವಿಗೊಳಿಸಬೇಕು. ಸಮನ್ವಯ ಸಾಧಿಸಿಕೊಂಡು ಲಸಿಕಾಕರಣ ಕಾರ್ಯ ಮಾಡಬೇಕು ಎಂದು ತಿಳಿಸಿದರು.
(Visited 7 times, 1 visits today)