ಹುಳಿಯಾರು:

      ಕೊರೊನಾದಿಂದ ಪತಿ-ಪತ್ನಿ ಇಬ್ಬರೂ ಒಂದೇ ದಿನ ಸಾವನ್ನಪ್ಪಿದ ಘಟನೆ ಹುಳಿಯಾರು ಹೋಬಳಿ ಕುರಿಹಟ್ಟಿಯಲ್ಲಿ ನಡೆದಿದೆ.

       ಕುರಿಹಟ್ಟಿ ಗೊಲ್ಲರಹಟ್ಟಿ ಗ್ರಾಮದ ರಮೇಶ್ (52) ಹಾಗೂ ಪತ್ನಿ ತೊಳಸಮ್ಮ (45) ಇಬ್ಬರು ಸಾವಿನಲ್ಲಿ ಒಂದಾದ ದಂಪತಿಗಳಾಗಿದ್ದಾರೆ. ರಾತ್ರಿ 9 ಗಂಟೆ ಸಮಯಲ್ಲಿ ಪತಿ ಸಾವನ್ನಪ್ಪಿದರೆ, ಪತ್ನಿ ರಾತ್ರಿ 12 ಕ್ಕೆ ಸಾವನ್ನಪ್ಪಿದ್ದಾರೆ.

       ತೊಳಸಮ್ಮ ಅವರಿಗೆ ಕೊರೊನಾ ದೃಢಪಟ್ಟು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ರಮೇಶ್ ಕೂಡ ಕೊರೊನಾದಿಂದ ತಿಪಟೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಒಂದೇ ರಾತ್ರಿ ಬೇರೆ ಬೇರೆ ಕಡೆ ಸಾವನ್ನಪ್ಪಿದ್ದಾರೆ. ಮೃತರಿಗೆ ತಂದೆ, ತಾಯಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಮೃತರ ಸಂಸ್ಕಾರ ಮೃತರ ಜಮೀನಿನಲ್ಲಿ ನಡೆಯಿತು.

(Visited 5 times, 1 visits today)