ಶಿರಾ :
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಅತ್ತೆಯನ್ನು ಸೊಸೆಯೇ ಪೆಟ್ರೋಲ್ ಸುರಿದು ಕೊಲೆ ಮಾಡಿರುವ ದುರ್ಘಟನೆ ತಾಲ್ಲೂಕಿನ ಗೌಡನಗೆರೆಯ ಉಜ್ಜನಕುಂಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರೋಜಮ್ಮ(65) ಕೊಲೆಯಾದ ದುರ್ದೈವಿ. ಇವರ ಸೊಸೆ ಸುಧಾಮಣಿ ಮತ್ತು ಈಕೆಯ ಪ್ರಿಯಕರ ಶ್ರೀರಂಗಪ್ಪ ಕೊಲೆಗೈದ ಆರೋಪಿಗಳು.
ಸರೋಜಮ್ಮ ರವರು ತಮ್ಮ ಮನೆಯಲ್ಲಿ ಸುಟ್ಟಗಾಯಗಳಿಂದ ಮೃತಪಟ್ಟಿದ್ದರು ಎನ್ನಲಾಗಿತ್ತು. ಈ ಕುರಿತು ತಾವರೆಕೆರೆ ಪಿಎಸ್ಐ ಪಾಲಾಕ್ಷಪ್ರಭು ರವರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ ವೇಳೆ ಅನುಮಾನ ಬಂದು ಮೇಲಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ನಂತರ ಪೊಲೀಸ್ ಅಧೀಕ್ಷಕರು ಪರಿಶೀಲನೆ ನಡೆಸಿ ಎಫ್ಎಸ್ಎಲ್ ವೈಜ್ಞಾನಿಕ ತನಿಖೆ ನಡೆಸಲಾಗಿ ಇದು ಕೊಲೆ ಎಂದು ಶಂಕಿಸಿದ್ದಾರೆ.
ಈ ಕುರಿತು ಸರೋಜಮ್ಮರ ಅಳಿಯ, ಸೊಸೆಯ ಮೇಲೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಸೊಸೆ ಸುಧಾಮಣಿ ಮತ್ತು ಶ್ರೀರಂಗಪ್ಪರ ಅಕ್ರಮ ಸಂಬಂಧದ ವಿಷಯ ಬೆಳಕಿಗೆ ಬಂದಿದೆ. ಇವರಿಬ್ಬರಿಗೆ ಅಡ್ಡಿಯಾಗಿದ್ದ ಅತ್ತೆ ಸರೋಜಮ್ಮ ರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು, ಶ್ರೀರಂಗಪ್ಪ ಪೆಟ್ರೋಲ್ ತಂದು ಕೊಟ್ಟಿದ್ದು, ಸುಧಾಮಣಿ ಅತ್ತೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಆರೋಪಿಗಳನ್ನು ಪತ್ತೆ ಹಚ್ಚಲು ಸಹಕರಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ರವರು ಅಭಿನಂದಿಸಿದ್ದಾರೆ.