ತುಮಕೂರು :

      ಪಡಿತರ ಚೀಟಿದಾರರಿಗೆ ಪಡಿತರ ವಿತರಣೆಯಲ್ಲಿ ಸಮಸ್ಯೆ/ಲೋಪದೋಷಗಳು ಉಂಟಾದಲ್ಲಿ ಆಯಾ ತಾಲ್ಲೂಕಿನ ತಹಸೀಲ್ದಾರ್/ಆಹಾರ ಇಲಾಖೆಯ ಆಹಾರ ಶಿರಸ್ತೇದಾರ್/ಆಹಾರ ನಿರೀಕ್ಷಕರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪಡಿತರ ವಿತರಣೆ, ಕಾರ್ಡುದಾರದಿಂದ ಹಣ ಪಡೆಯುವಿಕೆ, ನಿಗದಿತ ಸಮಯಕ್ಕೆ ನ್ಯಾಯಬೆಲೆ ಅಂಗಡಿ ಬಾಗಿಲು ತೆರೆಯದೇ ಇರುವುದು, ಒಂದೆರಡು ದಿನ ಮಾತ್ರ್ರ ಪಡಿತರ ವಿತರಣೆ ಮಾಡಿ ನಂತರ ಬಂದವರಿಗೆ ಪಡಿತರ ಇಲ್ಲವೆಂದು ನಿರಾಕರಿಸುವುದು, ಪಡಿತರ ಪದಾರ್ಥಗಳ ಜೊತೆಗೆ ಮುಕ್ತ ಮಾರುಕಟ್ಟೆ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಿಸುವುದು, ಕಾರ್ಡುದಾರರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಬಯೋಮೆಟ್ರಿಕ್ ಪಡೆದು ಮರುದಿನ ಪಡಿತರ ವಿತರಿಸುವುದು, ಒಂದು ದಿನ ಟೋಕನ್ ವಿತರಣೆ ಮಾಡಿ ಮತ್ತೊಂದು ದಿನ ಪಡಿತರ ವಿತರಿಸುವುದು, ಕಳಪೆ ಗುಣಮಟ್ಟದ ಪಡಿತರ ವಿತರಣೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಅಥವಾ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ.
ದೂರು ಸಲ್ಲಿಸಲು ತಾಲ್ಲೂಕುವಾರು ಆಹಾರ ಶಿರಸ್ತೇದಾರ್ ಮತ್ತು ಆಹಾರ ನಿರೀಕ್ಷಕರ ದೂರವಾಣಿ ಸಂಖ್ಯೆ ವಿವರ ಇಂತಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತುಮಕೂರು ಕಛೇರಿ(0816-227834); ಚಿಕ್ಕನಾಯಕನಹಳ್ಳಿ: ಕಿರಣ್‍ಕುಮಾರ್ ಟಿ.ಯು(9611350376), ಡಿ.ಗಿರಿಸುತೆ(9008149950); ಗುಬ್ಬಿ: ಜಗದೀಶ್ (9880612025), ಸಿದ್ದೇಗೌಡ(9535842027), ಕೊರಟಗೆರೆ: ಜಯಸಿಂಹ(9739732412), ಕೃಷ್ಣಮೂರ್ತಿ(9448782866), ಚನ್ನಾಂಬಿಕೆ(9740110390); ಕುಣಿಗಲ್: ಮಲ್ಲಿಕಾರ್ಜುನ ಟಿ.ಎಂ. (9448220792), ನಾಗೇಂದ್ರ ಹೆಚ್.ಎಸ್.(9148869881), ಸಚಿನ್ ಪ್ರಸಾದ್(8884854954); ಮಧುಗಿರಿ: ಗಣೇಶ್ ಹೆಚ್.ಆರ್.(9741175118), ಹರೀಶ್ ಕುಮಾರ್ ಬಿ.ಎನ್. (9964521256), ಮೊಹಮ್ಮದ್ ನಸರುದ್ದೀನ್ (9620808870); ಪಾವಗಡ: ಕೃಷ್ಣ ಮೂರ್ತಿ ಎಸ್.ಕೆ. (8660184016), ಮಂಜುನಾಥ್ ಕೆ.ಹೆಚ್.(7353795246); ಶಿರಾ: ಡಿ.ನಾಗರಾಜ್(9448026816), ಸುಜಾತ ಎಸ್.ಆರ್ (9731740902), ತಿಪಟೂರು: ರೇಣುಕಾ ಕೆ.ಎಲ್(9742572653), ಜಗದಾಂಭ (9880488591); ತುಮಕೂರು: ಶ್ರೀಹರ್ಷ ಬಿ.ಎಸ್.(9916580370), ಯಶೋಧಮ್ಮ ಪಿ.ಬಿ.(9481932507); ತುಮಕೂರು ನಗರ: ಜಯಪ್ರಕಾಶ್ (9008939884), ದಕ್ಷಿಣಮೂರ್ತಿ(8310469481); ತುರುವೇಕೆರೆ: ಪ್ರೇಮಾ ಜಿ.ಹೆಚ್.(7996438974), ಕೃಷ್ಣೇಗೌಡ (8951837064) ಅವರನ್ನು ಸಂಪರ್ಕಿಸಬಹುದಾಗಿದೆ.
ಸರ್ಕಾರ ನಿಗಧಿಪಡಿಸಿರುವಂತೆ ಎಎವೈ ಪಡಿತರ ಚೀಟಿದಾರರಿಗೆ 15 ಕೆ.ಜಿ. ಅಕ್ಕಿ, 20 ಕೆ.ಜಿ. ರಾಗಿ, ಪ್ರಧಾನ ಮಂತ್ರಿ ಗರೀಭ್ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ; ಪಿ.ಹೆಚ್.ಹೆಚ್. (ಬಿ.ಪಿ.ಎಲ್.) ಪ್ರತಿ ಸದಸ್ಯರಿಗೆ 2 ಕೆ.ಜಿ. ಅಕ್ಕಿ, 3 ಕೆ.ಜಿ. ರಾಗಿ, 2 ಕೆ.ಜಿ. ಗೋಧಿ, ಪ್ರಧಾನ ಮಂತ್ರ ಗರೀಭ್ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ವಿತರಿಸಲಾಗುವುದು.
ಪಡಿತರಕ್ಕೆ ಕೋರಿಕೆ ಸಲ್ಲಿಸಿರುವ ಎನ್.ಪಿ.ಹೆಚ್.ಹೆಚ್. (ಎಪಿಎಲ್) ಕಾರ್ಡುಗಳಿಗೆ ಏಕ ಸದಸ್ಯ ಪಡಿತರ ಚೀಟಿಗೆ 5ಕೆ.ಜಿ. ಅಕ್ಕಿ, ಎರಡಕ್ಕಿಂತ ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ. (ಕೆ.ಜಿ.ಗೆ.15ರೂ.ನಂತೆ) ಅಕ್ಕಿ ವಿತರಣೆ ಮಾಡಲಾಗುವುದು. ಪೋರ್ಟಬಲಿಟಿ ಅಂತರ್ ರಾಜ್ಯ/ ಜಿಲ್ಲೆ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

(Visited 60 times, 1 visits today)