ಕೊರಟಗೆರೆ:
ತಾಲ್ಲೂಕಿನ ಕಸಬಾ ಹೋಬಳಿಯ ಬೋಡಬಂಡೇನಹಳ್ಳಿ ಗ್ರಾಮದ ಯುವಕರಿಂದ ಕಸಾಯಿ ಖಾನೆಗೆ ಹೋಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ.
ಮಲ್ಲೇಶ್ವರ ಗ್ರಾಮದಿಂದ ಬೋಡಬಂಡೇನಹಳ್ಳಿ ಮಾರ್ಗವಾಗಿ ಎರಡು ಹಸುವಿನ ಕರುಗಳನ್ನು ಕಸಾಯಿಖಾನೆಗೆ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿರುವುದನ್ನು ಸ್ಥಳೀಯ ಯುವಕರು ಕಂಡು ನಿಲ್ಲಿಸಿ ವಿಚಾರಿಸಿದಾಗ ಅವುಗಳನ್ನು ಸಾಕಲು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅನುಮಾನಗೊಂಡ ಯುವಕರು ಸ್ಥಳೀಯ ಪತ್ರಕರ್ತರಾದ ಹರೀಶ್‍ರವರಿಗೆ ಕರೆ ಮಾಡಿದ್ದಾರೆ. ಕರೆ ಮಾಡಿದ ತಕ್ಷಣ ಅಲ್ಲಿಗೆ ತೆರಳುವಷ್ಟರಲ್ಲಿ ಕಸಾಯಿ ಖಾನೆಯ ಕಟುಕರು ಕರುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಕರುಗಳು ಸದ್ಯಕ್ಕೆ ಪತ್ರಕರ್ತರಾದ ಹರೀಶ್ ಅವರ ಮನೆಯ ಬಳಿ ಇದ್ದು ಮರುದಿನ ಬೆಳಿಗ್ಗೆ ಆ ಕರುಗಳನ್ನು ಸ್ಥಳಿಯ ಯಾವುದಾದರೂ ಮಠಕ್ಕೆ ಬಿಟ್ಟು ಬರುವುದಾಗಿ ಅವರು ತಿಳಿಸಿದ್ದಾರೆ. ಕರುಗಳನ್ನು ರಕ್ಷಿಸಿರುವ ಯುವಕರನ್ನು ಗ್ರಾಮಸ್ಥರು ಹಾಗೂ ಗೋ ಪ್ರಿಯರು ಹರ್ಷಿಸಿದರು.
(Visited 6 times, 1 visits today)