ತುಮಕೂರು:

      ಸಾವಿರಾರು ಖಾಲಿ ನಿವೇಶನ. ಈ ನಿವೇಶನದಲ್ಲಿ ಬೆಳೆದ ಗಿಡ ಗಂಟಿಗಳಲ್ಲಿ ವಿಷಪೂರಿತ ಹಾವುಗಳು. ಜನವಸತಿ ಪ್ರದೇಶದ ಖಾಲಿ ನಿವೇಶನಗಳಲ್ಲಿಯೂ ತುಂಬಿ ಹೋಗಿರುವ ಕಸ, ಕಡ್ಡಿ ಕೋಳಿ ತ್ಯಾಜ್ಯ. ದುರ್ನಾತದ ಜತೆಯಲ್ಲೇ ಜನತೆಯ ನಿತ್ಯ ಜೀವನ? ಈ ಸಮಸ್ಯೆಗಳೆಲ್ಲಾ ಇರುವುದು ಬೇರೆಲ್ಲೂ ಅಲ್ಲ, ಶೈಕ್ಷಣಿಕ ನಗರ ಹಾಗೂ ಸ್ಮಾರ್ಟ್‍ಸಿಟಿ ನಗರಗಳ ಪಟ್ಟಿಗೆ ಸೇರ್ಪಡೆಯಾಗಿರುವ ತುಮಕೂರು ನಗರದಲ್ಲಿ.
ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಾಗಿರುವ ತುಮಕೂರು ನಗರ ಸ್ವತ್ಛತೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಈಗ ಮೊದಲನೇ ಸ್ಥಾನದ ಪ್ರಯತ್ನದಲ್ಲಿ ಇರುವ ಸ್ಮಾರ್ಟ್‍ಸಿಟಿ ನಗರದಲ್ಲಿನ ಖಾಲಿ ನಿವೇಶನ ಗಳು ಜನ ಸಾಮಾನ್ಯರಿಗೆ ಕಿರಿಕಿರಿಯನ್ನುಂಟು ಮಾಡಿವೆ. ನಗರ ಹೊರವಲಯದ ಜನವಸತಿ ಪ್ರದೇಶದ ಜನ ನಿತ್ಯವೂ ಸುಟ್ಟ ಕೆಟ್ಟ ವಾಸನೆ, ನಿವೇಶನಗಳಲ್ಲಿ ವಾಸವಾಗಿರುವ ಹಾವುಗಳು, ದುರ್ವಾಸನೆ ಒಂದಲ್ಲ, ಎರಡಲ್ಲ ಹತ್ತಾರು ಸಮಸ್ಯೆ ನಿತ್ಯಕಾಡುತ್ತಿದೆ. ಗಿಡ-ಗಂಟಿ:ಹಣವಂತರು ತಮ್ಮ ಹಣವನ್ನು ದ್ವಿಗುಣಗೊಳಿಸಲು ನಗರದ ವಿವಿಧ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದ್ದಾರೆ.
ಸರಸ್ವತಿ ಪುರಂ 2ನೇ ಹಂತದಲ್ಲಿ ನೀಲಗಿರಿ ಮರಗಳು ಬೆಳೆದು ನಿಂತಿದ್ದು ಅನೈತಿಕ ಚಟುವಟಿಕೆ ತಾಣವಾಗಿದೆ. ಜತೆಗೆ ಮದ್ಯವ್ಯಸನಿಗಳ ಜಾಗವೂ ಇದಾಗಿದೆ. ಅಲ್ಲದೇ, ಸತ್ತ ನಾಯಿ ಹಂದಿ, ದನ ಕಸ ತಂದು ಹಾಕುತ್ತಿದ್ದು ದುರ್ನಾತ ಬೀರುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

(Visited 5 times, 1 visits today)