ಚಿಕ್ಕನಾಯಕನಹಳ್ಳಿ:

      ಪ್ರಸಿದ್ದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಏಕಾದಶಿ ಉತ್ಸವವು ಅತ್ಯಂತ ಸರಳವಾಗಿ, ದೇವಾಲಯದ ಪ್ರಾಂಗಾಣದೊಳಗೆ ಆಂಜನೇಯಸ್ವಾಮಿಯವರ ಬೆಳ್ಳಿ ಪಲ್ಲಕ್ಕಿ ಉತ್ಸವದೊಂದಿಗೆ ನಡೆಯಿತು.

ಜಾತ್ರೆಯ ಸಡಗರವಿಲ್ಲದೆ ದೇವರಿಗೆ ಅರ್ಪಿಸುವ ಪೂಜಾ, ವಿಧಿ ವಿಧಾನಗಳು ಮಾತ್ರ ದೇವಾಲಯದಲ್ಲಿ ಜರುಗಿತು. ಕೋವಿಡ್-19 ಕಳೆದ ವರ್ಷದಂತೆ ಈ ವರ್ಷವೂ ಇರುವುದರಿಂದ ಸರಳವಾಗಿ ದೇವರ ಪೂಜೆಯು ನಡೆಯಿತು.

ದೇವಾಲಯದ ಆಡಳಿತ ಮಂಡಳಿ ಹಾಗೂ ತಾಲ್ಲೂಕು ಆಡಳಿತದ ಮಂದಿ ಹಾಗೂ ಪೂಜಾರರು,ಗೊರವಯ್ಯನವರು, ದಾಸಪ್ಪನವರು, ಕೆಂಚರಾಯಸ್ವಾಮಿಗಳು ಈ ವೇಳೆ ಹಾಜರಿದ್ದರು.

ಜುಲೈ 21 ಹಾಗೂ 22ರ ಬುಧವಾರವೂ ದೇವರ ರಥೋತ್ಸವವು ದೇವಾಲಯದ ಆವರಣದೊಳಗೆ ನಡೆಯಲಿದೆ. ದೇವಾಲಯದ ಒಳಗಿನ ಆವರಣದಲ್ಲಿ ಸಂಚರಿಸಲು ಸಾಧ್ಯವಾಗುವಂತಹ ಚಿಕ್ಕದಾದ ರಥವಿದೆ, ಆ ರಥದಲ್ಲಿ ಆಂಜನೇಯಸ್ವಾಮಿ ಪ್ರತಿಮೆಯನ್ನು ಕೂರಿಸಿ ದೇವಾಲಯದ ಪ್ರಾಂಗಣದ ಚಿಕ್ಕ ರಥವನ್ನು ಎಳೆಯಲಾಗುವುದು.

(Visited 21 times, 1 visits today)