ಹುಳಿಯಾರು:
ಹೌದು ಸರ್ಕಾರ ಎಲ್ಲಾ ಗ್ರಾಮ ಪಂಚಾಯ್ತಿ ಕಛೇರಿಗಳ ಮುಂದೆ ಪ್ರತಿದಿನ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಬೇಕೆಂಬ ನಿಯಮ ಜಾರಿಗೆ ತಂದ ಮೇಲೆ ಧ್ವಜ್ಕಕೆ ಸಂಬಂಧಿಸಿದ ಅವಾಂತರಗಳು ಆಗುತ್ತಲೇ ಇವೆ. ಇದೀಗ ಅಂತದ್ದೇ ಅವಾಂತರದ ಪಟ್ಟಿಗೆ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿ ಸೇರಿದೆ.
ಹರಿದ, ಕೊಳಕಾದ, ಹಾಳಾದ ರಾಷ್ಟ್ರಧ್ವಜ ಹಾರಿಸುವದು ಅಪರಾಧ. ರಾಷ್ಟ್ರ ಧ್ವಜಕ್ಕೆ ತನ್ನದೇಯಾದ ಗೌರವ ಘನತೆ ಇದೆ. ಆದರೆ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿ ಧ್ವಜಸ್ಥಂಭದಲ್ಲಿ ಹರಿದ ದ್ವಜ ಹಾರಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಊರಿನ ಮಧ್ಯಭಾಗದಲ್ಲಿರುವ ಈ ಗ್ರಾಪಂ ಕಛೇರಿಗೆ ನಿತ್ಯ ಅಪಾರ ಸಂಖ್ಯೆಯಲ್ಲಿ ಹಳ್ಳಿಗರು ಕೆಲಸದ ನಿಮಿತ್ತ ಬರುತ್ತಾರೆ. ಅಲ್ಲದೆ ಪಂಚಾಯ್ತಿ ಎದುರಿಗಿನ ರಸ್ತೆಯ ಮೂಲಕ ಹಂನಕೆರೆ, ತಿಪಟೂರಿಗೆ ನಿತ್ಯ ನೂರಾರು ಮಂದಿ ಬಸ್, ಕಾರು, ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾರೆ. ಇಷ್ಟಿದರೂ ರಾಷ್ಟ್ರ ಧ್ವಜದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದೆ ಧ್ವಜ ಬದಲಾಯಿಸಿ ಹರಿದ ರಾಷ್ಟ್ರಧ್ವಜ ಹಾರಿಸಿ ಸಾರ್ವಜನಿಕರ ದಾರಿಹೋಕರ ಟೀಕೆಗೆ ಗುರಿಯಾಗಿದ್ದಾರೆ.