ಚಿಕ್ಕನಾಯಕನಹಳ್ಳಿ :

      ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ಶಾಸಕರಾದ ಡಾ.ಜಿ.ಪರಮೇಶ್ವರ್ ಜಿ ರವರ ನೇತೃತ್ವದಲ್ಲಿ ವಿಧಾನಪರಿಷತ್ ಚುನಾವಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರ ರವರ ಪರ ಇಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

      ಸಭೆಯಲ್ಲಿ ಮಾಜಿ ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ,ಶಾಸಕರಾದ ರಿಜ್ವಾನ್ ಆರ್ಷದ್ ರವರು,ಡಾ.ರಂಗನಾಥ್ ರವರು, ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರ ರವರು,ಮಾಜಿ ಸಂಸದರಾದ ಮುದ್ದಹನುಮೇಗೌಡವರು ,ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ನವರು,ಶಫಿ ಅಹಮದ್ ರವರು,ಕೆ ಷಡಕ್ಷರಿರವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಮಕೃಷ್ಣಪ್ಪರವರು ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಶಿಹುಲಿಕುಂಟೆ ಮಾಜಿ ಜಿ.ಪಂ ಸದಸ್ಯರಾದ ಪಾವಗಡ ವೆಂಕಟೇಶ್, ಕೆಂಚಮಾರಯ್ಯ,ಜಿ.ಜೆ.ರಾಜಣ್ಣ,ಮುಖಂಡರಾದ ಕೊಂಡವಾಡಿ ಚಂದ್ರಶೇಖರ್,ಚಂದ್ರಶೇಖರ್ ಗೌಡ, ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,ಚಿಕ್ಕನಾಯಕನಹಳ್ಳಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಹಾಲಿ ಹಾಗೂ ಮಾಜಿ ಸದಸ್ಯರು.ಮಾಜಿ ಜಿ.ಪಂ, ತಾ.ಪಂ.ಸದಸ್ಯರು,ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಭಾಗವಹಿಸಿದ್ದರು.

 

(Visited 21 times, 1 visits today)