ತುಮಕೂರು :

           

         ವಿಧಾನ ಪರಿಷತ್ ಚುನಾವಣೆಗೆ ಇನ್ನೂ ಕೇವಲ 9 ದಿನಗಳು ಮಾತ್ರ ಬಾಕಿ ಉಳಿದಿದೆ, ತುಮಕೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಾಗಿಸಲು ಮಾಜಿ ಪಿಎಂ ದೇವೇಗೌಡರ ಅಂಶಗಳು ಪ್ರಮಖ ಪಾತ್ರ ವಹಿಸುವ ಸೂಚನೆಗಳು ದೊರಕಿವೆ.

      2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರೂ ತುಮಕೂರು ಕ್ಷೇತ್ರದಲ್ಲಿ ಗೌಡರು ಸೋತಿದ್ದರು.

     

 

   

 

 

 

   ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ಪಿತೂರಿ ಇದಕ್ಕೆ ಕಾರಣಎೆಬುದು ಬಹಿರಂಗ ಸತ್ಯ, ಹೀಗಾಗಿ ಒಕ್ಕಲಿಗರು, ದಲಿತರು ಅದರ ಸೇಡು ತೀರಿಸಿಕೊಳ್ಳಲು ಹವಣಿಸಿದ್ದಾರೆ.

     ಇದಕ್ಕೆ ಸಾಕ್ಷಿ ಎಂಬಂತೆ ಎಸ್ ಟಿ ನಾಯಕ ಸಮುದಾಯದ ಮಾಜಿ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್. ಅದೇ ಸಮುದಾಯಕ್ಕೆ ಸೇರಿದ ರಾಜಣ್ಣ ಪುತ್ರ ಆರ್ ರಾಜೇಂದ್ರ ವಿರುದ್ಧ ಸಮರ ಸಾರಿದ್ದಾರೆ.

     

 

 

 

 

 

 

     ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆಯಿಂದ ಕುಂಚಟಿಗ ಒಕ್ಕಲಿಗ, ಎನ್ ಲೋಕೇಶ್/ ಲೋಕೇಶ್ ಗೌಡ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

      ನಾವು ಜಾತಿಯೊಳಗಿರುವ ಉಪಪಂಗಡಗಳನ್ನು ವಿಭಜಿಸಲು ಹೋಗುವುಗದಿಲ್ಲ, ಹೀಗಾಗಿ ಲೋಕೇಶ್ ಗೌಡರನ್ನು ಬೆಂಬಲಿಸುತ್ತೇವೆ, ರಾಜಣ್ಣನವರ ಪುತ್ರನನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ತುರುವೆಕೆರೆ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ಬೆಂಬಲಿಗೆ ನರಸೇಗೌಡ ಎಂಬುವರು ತಿಳಿಸಿದ್ದಾರೆ.

     ಕಳೆದ ಬಾರಿ ಜೆಡಿಎಸ್, ಬಂಡಾಯ ನಾಯಕ ಬಿಇಎಂಎಲ್ ಕಾಂತರಾಜು ಅವರನ್ನು ಕಣಕ್ಕಳಿಸಿತ್ತು. ಆ ವೇಳೆ ಜೆಡಿಎಸ್ ನ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದರು. ಆದರೆ ಈ ಬಾರಿ ಕಾಂತರಾಜು ಮತ್ತು ಗುಬ್ಬಿ ಶಾಸಕ ಬಂಡಾಯವೆದಿದ್ದಿದ್ದಾರೆ .

      ಹೀಗಾಗಿ ಕೆಲ ಒಕ್ಕಲಿಗ ನಾಯಕರು ಬಿಜೆಪಿ ಅಭ್ಯರ್ಥಿ ತಮ್ಮ ಸಮುದಾಯದವರೆಂಬ ಕಾರಣಕ್ಕೆ ಬಿಜೆಪಿ ಬೆಂಬಲಿಸುತ್ತಿದ್ದಾರೆ.

 

(Visited 47 times, 1 visits today)