ಗುಬ್ಬಿ :

      ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಗುಬ್ಬಿ ಪಟ್ಟಣದ ಹೇರೂರು ಬಳಿಯ ಶ್ರೀಬಾಲಾಜಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ ಅವರ ಪರವಾಗಿ ಮತಯಾಚನೆ ಮಾಡಲು ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡರು ಆಗಮಿಸುತ್ತಿದ್ದು ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರು, ಪಟ್ಟಣ ಪಂಚಾಯ್ತಿ ಸದಸ್ಯರು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಬಿ.ಎಸ್.ನಾಗರಾಜು ಮನವಿ ಮಾಡಿದ್ದಾರೆ.

ವಿದ್ಯಾವಂತ ಅಭ್ಯರ್ಥಿಯಾದ ಅನಿಲ್ ಕುಮಾರ್ ಅವರು ಕೆ.ಎ.ಎಸ್.ಅಧಿಕಾರಿಯಾಗಿ ಜನರ ಸಮಸ್ಯೆಯನ್ನು ಅರಿತಿದ್ದು ಅಧಿಕಾರಿಗಳ ಮತ್ತು ಸರ್ಕಾರದ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಒಬ್ಬ ವಿದ್ಯಾವಂತ, ಉತ್ತಮ ಅಭ್ಯರ್ಥಿಯನ್ನು ಜೆಡಿಎಸ್ ಪಕ್ಷದ ವರಿಷ್ಠರು ಜಿಲ್ಲೆಗೆ ನೀಡಿದ್ದು ಇಂತಹ ಅಭ್ಯರ್ಥಿಯನ್ನು ಚುನಾಯಿತ ಪ್ರತಿನಿಧಿಗಳು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಮಾಂಜನಪ್ಪ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಹಿರಿಯ ಮುಖಂಡ ಎಂ.ಗಣಗಣ್ಣ, ಮುಖಂಡರಾದ ಶಿವಣ್ಣ, ಯುವ ಮುಖಂಡ ಯೋಗೀಶ್, ಗೋಪಾಲ್ ಗೌಡ ಇತರರು ಇದ್ದರು‌.

(Visited 5 times, 1 visits today)