ತುಮಕೂರು : 

      ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮಕ್ಕಳ ಮತ್ತು ಕ್ಯಾನ್ಸರ್ ತಜ್ಞರಾದ ಡಾ. ಸ್ಟಾಲಿನ್‍ರಾಮ್‍ಪ್ರಕಾಶ್ ಅವರು ಬಾಂಗ್ಲಾದೇಶದ ಢಾಕಾ ನಗರದಲ್ಲಿ ಅಸ್ಥಿಮಜ್ಜೆ (ಥಲಸ್ಸೆಮಿಯಾ) ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು ಏಳು ವರ್ಷದ ಹೆಣ್ಣು ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸುವ ಮೂಲಕ ಆ ದೇಶದಿಂದ ಸೈ ಎನಿಸಿಕೊಂಡು ಭಾರತಕ್ಕೆ ಕೀರ್ತಿ ಮತ್ತು ಹೆಮ್ಮೆ ತಂದಿದ್ದಾರೆ.

      ಢಾಕಾದ ಕಂಬೈನ್ ಮಿಲಿಟರಿ ಆಸ್ಪತ್ರೆಯ ವೈದ್ಯರಾದ ಡಾ.ಶಾರ್ಮಿನ್ ಅವರು ಥಲಸ್ಸೆಮಿಯಾ ಹೊಂದಿರುವ ಮಗುವಿಗೆ ತಮ್ಮ ಮೊದಲ ಮಕ್ಕಳ ಅಲೋಜೆನಿಕ್ ಮೂಳೆ ಮಜ್ಜೆಯ ಕಸಿ ಮಾಡುವಾಗ ಈ ಪ್ರಕ್ರಿಯೆಗೆ ಸಹಾಯ ಮಾಡಲು ಡಾ.ಸ್ಟಾಲಿನ್ ರಾಮ್‍ಪ್ರಕಾಶ್ ಅವರ ಬೆಂಬಲ ಮತ್ತು ಸಹಾಯವನ್ನು ಕೋರಿ ಸ್ಟಾಲಿನ್ ಅವರು ಢಾಕಾಗೆ ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ಡಾ.ಸ್ಟಾಲಿನ್ ರಾಮ್‍ಪ್ರಕಾಶ್ ಅವರು ಢಾಕಾಗೆ ಹೋಗಿ ಥಲಸ್ಸೆಮಿಯಾ ಸಮಸ್ಯೆ ಇವರು 7 ವರ್ಷದ ಮಗುವಿಗೆ ಮೂಳೆ ಮಜ್ಜೆಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು.

ಚಿಕಿತ್ಸೆಯ ಲಾಭವೇನು.? :

      ಮೂಳೆ ಮಜ್ಜೆಯ ಕಸಿಯು ಈ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸುತ್ತದೆ. ನಂತರ ಈ ಮಗು ಇತರ ಸಾಮಾನ್ಯ ವ್ಯಕ್ತಿಗಳಂತೆ ಸಾಮಾನ್ಯ ಜೀವನವನ್ನು ನಡೆಸಬಹುದು. ಮಕ್ಕಳ ಮತ್ತು ಕ್ಯಾನ್ಸರ್ ತಜ್ಞರಾದ ಡಾ.ಸ್ಟಾಲಿನ್ ಅವರು ಪ್ರತಿ ಗುರುವಾರ ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡುತ್ತಾರೆ.

 ಏನಿದು ಕಾಯಿಲೆ:

      ಥಲಸ್ಸೆಮಿಯಾ ಎನ್ನುವುದು ಮಕ್ಕಳು ಬದುಕಲು, ತಮ್ಮ ಜೀವನದುದ್ದಕ್ಕೂ ನಿಯಮಿತ ರಕ್ತ ವರ್ಗಾವಣೆಯನ್ನು ಅವಲಂಬಿಸಿರುವ ಸ್ಥಿತಿಯಾಗಿದೆ, ನಿಯಮಿತ ರಕ್ತ ವರ್ಗಾವಣೆಯ ಹೊರತಾಗಿಯೂ, ಕಬ್ಬಿಣಾಂಶದ ವಿಪರೀತ ಪೂರೈಕೆಯಿಂದ ನಿಯಮಿತ ರಕ್ತ ವರ್ಗಾವಣೆಯ ತೊಡಕಿನಿಂದಾಗಿ ಅವರ ಜೀವಿತಾವಧಿಯು ಸೀಮಿತವಾಗಿರುತ್ತದೆ ಮತ್ತು ಅವರು ಕಳಪೆ ಗುಣಮಟ್ಟದ ಜೀವನವನ್ನು ಹೊಂದಿರುತ್ತಾರೆ ಹಾಗಾಗಿ ದಾನಿಗಳ ಅಥವಾ ಅನ್ಯ ವ್ಯಕ್ತಿಗಳು ನೀಡಿದ ಅಸ್ಥಿಮಜ್ಜೆಯನ್ನು ತೆಗೆದು ಈ ಸಮಸ್ಯೆ ಇರುವವರಿಗೆ ಕಸಿ ಮಾಡಿದರೇ ಥಲಸ್ಸೆಮಿಯಾವು ಶಾಶ್ವತವಾಗಿ ದೂರವಾಗುವ ಸಂಭವವಿರುತ್ತದೆ ಎಂದು ಶ್ರೀದೇವಿ ವೈದ್ಯಕೀಯ ಆಸ್ಪತೆಯ ಮಕ್ಕಳ ಮತ್ತು ಕ್ಯಾನ್ಸರ್ ತಜ್ಞರಾದ ಡಾ. ಸ್ಟಾಲಿನ್‍ರಾಮ್‍ಪ್ರಕಾಶ್‍ರವರು ತಿಳಿಸಿದರು.

ಡಾ.ಸ್ಟಾಲಿನ್ ಅವರಿಗೆ ಅಭಿನಂದನೆ :

      ಬಾಂಗ್ಲಾದೇಶದ ಮೊದಲ (ಪೀಡಿಯಾಟ್ರಿಕ್ ಅಲೋಜೆನಿಕ್ ಬೋನ್‍ಮ್ಯಾರೋ ಟ್ರಾನ್ಸ್ ಪ್ಲಾಂಟ್) ಅಸ್ಥಿಮಜ್ಜೆ ವರ್ಗಾವಣೆ ಪ್ರಕ್ರಿಯೆಯ ಶಸ್ತ್ರಚಿಕಿತ್ಸೆಯನ್ನು ಢಾಕಾದ ಸಂಯೋಜಿತ ಮಿಲಿಟರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಿದ ವೈದ್ಯ ಡಾ.ಸ್ಟಾಲಿನ್‍ರಾಮ್‍ಪ್ರಕಾಶ್ ಅವರ ಸಾಧನೆಗಾಗಿ ಅವರನ್ನು ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ.ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ವೈದ್ಯಕೀಯ ಪ್ರಾಂಶುಪಾಲರಾದ ಡಾ.ಡಿ.ಕೆ.ಮಹಾಬಲರಾಜು, ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿ ಹಾಗೂ ಶ್ರೀದೇವಿ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಲಾಗಿದೆ.

 

 

(Visited 50 times, 1 visits today)