ತುರುವೇಕೆರೆ : 

      ತಾಲೂಕಿನ ತೊರೆಮಾವಿನಹಳ್ಳಿ ಗೇಟ್‍ನಿಂದ ಬೂವನಹಳ್ಳಿ-ಆನೆಕೆರೆ ಮಾರ್ಗವಾಗಿ ಮಲ್ಲಾಘಟ್ಟ ಕೆರೆ, ನಲ್ಲಿಕೆರೆ ಮಾರ್ಗವಾಗಿ ತಿಪಟೂರಿಗೆ ತಲುಪುವ ಸಂಪರ್ಕ ರಸ್ತೆ, ತೊರೆಮಾವಿನಹಳ್ಳಿ ಗೇಟ್‍ನ ಬಸವನತೋಟದ ಸಮೀಪ ಅಕಾಲಿಕ ಮತ್ತು ಸತತ ಮಳೆಯಿಂದ ಸಂಪೂರ್ಣ ಹಾಳಾಗಿದೆ.

     ಜನ ಜಾನುವಾರುಗಳು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ.ಸಂಬಂಧಪಟ್ಟವರು ಈ ಕೂಡಲೇ ಗಮನಹರಿಸಿ, ರಸ್ತೆ ದುರಸ್ತಿ ಮಾಡಿಕೊಡುವಂತೆ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

(Visited 23 times, 1 visits today)