ತುಮಕೂರು:
ಅಪಘಾತ ದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹುಲಿಯೂರುದುರ್ಗ ದೀಪಾಂಬುದಿ ಕ್ಷೇತ್ರದ ಹಿಂದಿನ ಗುರುಗಳು ಹಾಗೂ
ನಂದಿ ಸಿದ್ದನಗವಿ ಜ್ಞಾನಾನಂದಾಶ್ರಮದ ಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ(59) ಅವರು ಚಿಕಿತ್ಸೆ ಫಲಿಸದೆ ಬುಧವಾರ ಇಹಲೋಕ ತ್ಯಜಿಸಿದ್ದಾರೆ.
ವೇದ, ಉಪನಿಷತ್, ಭಾಷ್ಯ ಗಳು ಸೇರಿದಂತೆ ಸಂಸ್ಕೃತ, ಕನ್ನಡ ಗ್ರಂಥಗಳ ಬಗ್ಗೆ ಆಳ ಪಾಂಡಿತ್ಯ ಹೊಂದಿದ್ದ ಶ್ರೀ ಗಳು ರಾಜ್ಯ, ಹೊರರಾಜ್ಯ ದೇಶ ವಿದೇಶಗಳಲ್ಲಿ ತಮ್ಮ ವಿದ್ವತ್ ಪೂರ್ಣ ಉಪನ್ಯಾಸ ಗಳಿಂದ ರಾಷ್ಟ್ರ ಸಂತರೆಂದು ಬಿರುದಾಂಕಿತ ರಾಗಿದ್ದರು.
ಕವಿ, ಲೇಖಕರು ಆಗಿದ್ದ ಶ್ರೀ ಗಳು ವಿಶ್ವಕರ್ಮ ಸಮಾಜಕ್ಕೆ ದಾರಿದೀಪ ವಾಗಿ, ಎಲ್ಲಾ ಸಮಾಜದ ವರಿಗೂ ಗುರುವಾಗಿ ಮಾರ್ಗದರ್ಶನ ಮಾಡುತ್ತಿದ್ದರು.
ಇಂತಹ ಶ್ರೇಷ್ಠ ಗುರುವಿನ ಅಗಲಿಕೆ ನಾಡಿಗೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅರೆಮಾದನಹಳ್ಳಿ ಶ್ರೀಗಳು, ನಿಟ್ಟರಹಳ್ಳಿ ಸ್ವಾಮೀಜಿ, ಶ್ರೀ ರವಿ ಶಂಕರ್ ಗುರೂಜಿ ಸೇರಿದಂತೆ ನಾಡಿನ ಅನೇಕ ಗಣ್ಯರು, ಸಮಾಜದ ಮುಖಂಡರು ಶ್ರೀ ಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಯ ಸಿದ್ದನಗವಿ ಜ್ಞಾನಾನಂದಾಶ್ರಮದಲ್ಲಿ ಶ್ರೀ ಗಳ ಕ್ರಿಯಾ ಸಮಾಧಿವಿಧಿ ನೆರವೇರಲಿದೆ.