ತುಮಕೂರು :
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಮಠದ ವತಿಯಿಂದ ವಿದ್ಯಾರ್ಥಿ ನಿಲಯ ಸ್ಥಾಪಿಸಿ, ಶೈಕ್ಷಣಿಕ ಕ್ಷೇತ್ರಕ್ಕೆ ಮುರುಘ ಮಠದ ಕೊಡುಗೆ ಅಪಾರ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಶ್ರೀಶಿವಮೂರ್ತಿಮುರುಘರಾಜೇಂದ್ರ ಸಭಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಸಮಾಜದ ಜೊತೆ ಜೊತೆಗೆ ಸಣ್ಣಪುಟ್ಟ ಸಮುದಾಯಗಳ ಸ್ವಾಮೀಜಿಗಳಿಗೆ ದೀಕ್ಷೆ ನೀಡಿ, ಬಸವಣ್ಣ ತತ್ವವನ್ನು ಅಳವಡಿಸಿಕೊಂಡಿರುವ ನಿಜಯೋಗಿ ಎಂದು ತಿಳಿಸಿದರು.
ಬಸವಣ್ಣನವರ ತತ್ವಗಳನ್ನು ನಮಗೆ ಅರ್ಥವಾಗಿದ್ದು ಕಡಿಮೆ, ಶರಣ ಧರ್ಮದ ಬಗ್ಗೆ ಉತ್ತಮವಾದ ಕೆಲಸಗಳಾಗುತ್ತಿರುವುದು ಸಿದ್ಧಗಂಗಾ ಮಠ ಮತ್ತು ಮುರುಘ ಮಠದಿಂದ ಇಂತಹ ಇನ್ನ?À್ಟು ಕಾರ್ಯಗಳು ಹೆಚ್ಚಬೇಕಿದೆ, ಮನುಷ್ಯ ನಿಗೆ ಸಮಾಧಾನವೇ ಅವಶ್ಯಕ.ಸಮಾಧಾನವಿದ್ದರೆ ನೆಮ್ಮದಿ, ಸಂತೋ?À ಸಿಗುತ್ತದೆ ಅದಕ್ಕಾಗಿ ಆಧ್ಯಾತ್ಮಿಕ ಚಿಂತನೆಗಳು ಅಗತ್ಯ ಎಂದರು.
ತಂತ್ರಜ್ಞಾನ ಹೆಚ್ಚಾದಂತೆ ಆಧ್ಯಾತ್ಮಿಕ ಚಿಂತನೆಗಳು ಕಡಿಮೆಯಾಗುತ್ತಿವೆ.ಆಧ್ಯಾತ್ಮಿಕ ಚಿಂತನೆ,ಮನಸ್ಸಿನ ಸಂದ್ಧಿಗ್ನತೆ ದೂರವಾಗಿಸುವ ನಿಟ್ಟಿನಲ್ಲಿ ವೇದಿಕೆಯನ್ನು ಮುರುಘಾಶರಣರು ಮಾಡಿ ಕೊಟ್ಟಿದ್ದಾರೆ, ಹೊಸತನವನ್ನು ಹುಡುಕಲು ಯೋಗ, ಪ್ರಾರ್ಥನೆ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳು ಹೆಚ್ಚಲಿ ಎಂದರು.
ಶ್ರೀಶಿವಮೂರ್ತಿ ಮುರುಘರಾಜೇಂದ್ರ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗಶ್ರೀಗಳು,ಸಮಾಜದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದ ಮುರಾಘ ಮಠವು,ಅನೇಕ ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡಿದೆ.ಇಲ್ಲಿ ಆಶ್ರಯ ಪಡೆದವರು ಉನ್ನತ ಸ್ಥಾನದಲ್ಲಿದ್ದಾರೆ.ಬಸವಕೇಂದ್ರದ ಮೂಲಕ ಬಸವತತ್ವವನ್ನು ಪ್ರಸರಿಸುವ ಕಾಯಕ ನಿರಂತರವಾಗಿದೆ.ಬಸವಕೇಂದ್ರದ ತಾಯಂದಿರಿಗಾಗಿ ಈ ಸಭಾಂಗಣವನ್ನು ಮುರುಘ ಶರಣರು ನಿರ್ಮಿಸಿಕೊಟ್ಟಿದ್ದಾರೆ.ಬಹಿರ್ಮುಖಕ್ಕಿಂತ ಅಂತರಂಗದ ಬದುಕು ಮುಖ್ಯ, ಅದಕ್ಕಾಗಿ ಸತ್ ಚಿಂತನೆ ಮಾಡಬೇಕಿದೆ, ಮನಸ್ಸು ಶುದ್ಧವಾಗಿಟ್ಟುಕೊಳ್ಳಲು ಸತ್ ಚಿಂತನೆಗಳನ್ನು ಮಾಡಲು ಬಸವ ಕೇಂದ್ರ ನೆರವಾಗಲಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಬಸವಕೇಂದ್ರಕ್ಕೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿರುವ ಸಿದ್ಧಗಂಗಮ್ಮ ಅವರ ನೇತೃತ್ವದಲ್ಲಿ ಕೇಂದ್ರ ಉತ್ತಮವಾಗಿ ನಡೆಯುತ್ತಿದ್ದು,ಲೌಕಿಕ ಜಗತ್ತಿನೊಳಗೆ ದೈವಿಕ ಚಿಂತನೆಗಳ ಬಗ್ಗೆ ಕ್ಷಣಕಾಲವಾದರೂ ಚಿಂತಿಸಬೇಕಿ ರುವುದು ಅಗತ್ಯವಾಗಿದೆ, ಈ ನಿಟ್ಟಿನಲ್ಲಿ ಬಸವಕೇಂದ್ರ ಇನ್ನಷ್ಟು ವಿಸ್ತಾರವಾಗಲಿ ಎಂದು ಸಿದ್ದಗಂಗಾ ಶ್ರೀಗಳು ಆಶಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ,ವಿದ್ಯಾಭ್ಯಾಸಕ್ಕೆ ಮುರುಘಮಠ ನೀಡಿದಷ್ಟು ಕೊಡುಗೆ ಯಾರು ಕೊಡಲಿಲ್ಲ, ದಾವಣಗೆರೆಯಿಂದ ತುಮಕೂರಿನವರೆಗೆ ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಓದಿದವರೆಲ್ಲ ಅಧಿಕಾರಿಗಳಾಗಿದ್ದಾರೆ, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಪ್ರಾರಂಭಿಸಿದ್ದೇ ಮುರುಘಾಶ್ರೀಗಳು, ಜಯದೇವವನ್ನು ಉನ್ನತೀಕರಣ ಮಾಡಲು ಶ್ರೀಗಳು ಯೋಜನೆ ರೂಪಿಸಿದರೆ ಜಿಲ್ಲೆಯ ಎಲ್ಲರು ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ,ಪಾಲಿಕೆ ಸದಸ್ಯ ಮಹೇಶ್,ಬಸವಕೇಂದ್ರದ ಸಿದ್ಧಗಂಗಮ್ಮ ಬಿ.ಸಿದ್ದರಾಮಣ್ಣ,ಡಾ.ಡಿ.ಎನ್.ಯೋಗೀಶ್ವರಪ್ಪ,ಡಾ.ರಾಜಶೇಖರ್ಡಿ.ಬಿ.ಶಿವಾನಂದ್, ಚಂದ್ರಶೇಖರ್, ರಾಮಕೃ?À್ಣ ಪ್ಪ, ಜಿ.ಆರ್.ರೇಣುಕಾಪ್ರಸಾದ್, ಜಿ.ಆರ್.ನೇತ್ರಾಸುರೇಶ್, ಈಶ್ವರಯ್ಯ, ನಾಗರಾಜು, ಜಯಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.