ತುಮಕೂರು :
ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿ ಮಾರನಾಯಕನಪಾಳ್ಯ ಗ್ರಾಮಕ್ಕೆ ಹೋಗುವ ಪೂರ್ವದ ಕಡೆ ಪಂಪ್‍ಹೌಸ್ ಕಟ್ಟಡದ ಹಿಂಭಾಗ ಗುಡ್ಡ ಪ್ರದೇಶದ ಕಲ್ಲು ಬಂಡೆಗಳ ಮಧ್ಯದಲ್ಲಿರುವ ಆಲದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಜನವರಿ 10ರಂದು ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿ ಶವವೊಂದು ಪತ್ತೆಯಾಗಿದ್ದು, ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದಿರುವುದಿಲ್ಲ.
ಮೃತ ವ್ಯಕ್ತಿಯು 5.8 ಅಡಿ ಎತ್ತರ, ತೆಳ್ಳನೆ ಶರೀರ, ಕೋಲುಮುಖ ಹೊಂದಿದ್ದು, ಮೈಮೇಲೆ ತುಂಬುತೋಳಿನ ನೀಲಿ ಬಣ್ಣದ ಚುಕ್ಕೆಗಳಿರುವ ಅಂಗಿ, ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇರುತ್ತದೆ. ಮೃತನ ವಾರಸುದಾರರಿದ್ದಲ್ಲಿ ದೂ.ಸಂ. 0816-2281124/ 2281120/ 2278000 ಅಥವಾ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಬಿ. ಓಂಪ್ರಕಾಶ್ ಗೌಡ ಮನವಿ ಮಾಡಿದ್ದಾರೆ.
(Visited 15 times, 1 visits today)