ಕೊರಟಗೆರೆ:

       ಪಟ್ಟಣದ 15ವಾರ್ಡಿನ ಜನತೆಯ ಆರೋಗ್ಯ ರಕ್ಷಣೆಗೆ ಪಪಂಯಿಂದ ಮೊದಲ ಆಧ್ಯತೆ ನೀಡುವುದರ ಜೊತೆಯಲ್ಲಿ ಮೂಲಸೌಕರ್ಯ ಮತ್ತು ಸಮಗ್ರ ಅಭಿವೃದ್ದಿಗೆ ಪಪಂ ಅಧ್ಯಕ್ಷರ ನೇತೃತ್ವದ ತಂಡ ಶ್ರಮಿಸಲಿದ್ದಾರೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

ಕೊರಟಗೆರೆ ಪಟ್ಟಣದ ಪಪಂ ಕಚೇರಿಯಲ್ಲಿ ತಹಶೀಲ್ದಾರ್ ನಾಹೀದಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪಪಂ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕಾವ್ಯರಮೇಶ್ ಅವಿರೋದವಾಗಿ ಆಯ್ಕೆಯಾದ ನಂತರ ಮಾತನಾಡಿದರು.

ಕೊರಟಗೆರೆ ಪಟ್ಟಣದ ಜನತೆ ಜೆಡಿಎಸ್ ಪಕ್ಷಕ್ಕೆ ಪಪಂಯ ಅಧಿಕಾರ ನೀಡಿದ್ದಾರೆ. ಪಟ್ಟಣದ ಜನತೆ ನೀಡಿರುವ ಅಧಿಕಾರವನ್ನು ಅವರ ಸೇವೆಗಾಗಿ ಮೀಸಲಿಟ್ಟು ಅಭಿವೃದ್ದಿಗೆ ಪ್ರತಿಯೊಬ್ಬ ಸದಸ್ಯರು ಶ್ರಮಿಸಬೇಕಿದೆ. ಕೋವಿಡ್ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆ ಮತ್ತು ಪಪಂ ಅಧಿಕಾರಿವರ್ಗ ಜೊತೆಗೂಡಿ ಜನರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.

ಕೊರಟಗೆರೆ ಪಪಂಯ ನೂತನ ಅಧ್ಯಕ್ಷೆ ಕಾವ್ಯರಮೇಶ್ ಮಾತನಾಡಿ ನಾನು ಪಪಂಯ ಸದಸ್ಯರನ್ನಾಗಿ ಆಯ್ಕೆ ಮಾಡಿದ 1ನೇ ವಾರ್ಡಿನ ಜನತೆ ಮತ್ತು ಪಪಂಯ ಅಧ್ಯಕ್ಷರನ್ನಾಗಿ ಮಾಡಿದ ಎಲ್ಲಾ ಸದಸ್ಯರಿಗೆ ಚಿರಾಋಣಿ ಆಗಿದ್ದಾನೆ. ಪಟ್ಟಣದ ಅಭಿವೃದ್ದಿ ಸದಸ್ಯರ ಜೊತೆಗೂಡಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಮಾಜಿ ಶಾಸಕರಾದ ಪಿ.ಆರ್.ಸುಧಾಕರಲಾಲ್ ಮತ್ತು ಪಕ್ಷದ ಮುಖಂಡರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಚುನಾವಣೆ ವೇಳೆಯಲ್ಲಿ ತಹಶೀಲ್ದಾರ್ ನಾಹೀದಾ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಜೆಡಿಎಸ್ ಕಾರ್ಯದ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ನಟರಾಜ್, ಉಪಾಧ್ಯಕ್ಷೆ ಭಾರತಿಸಿದ್ದಮಲ್ಲಪ್ಪ, ಮಾಜಿ ಅಧ್ಯಕ್ಷೆ ಮಂಜುಳ ಸದಸ್ಯರಾದ ಪ್ರದೀಪಕುಮಾರ್, ಪುಟ್ಟನರಸಪ್ಪ, ನಾರಾಯಣ್, ಹುಸ್ನಾ ಪಾರೀಯಾ, ಅನಿತಾ, ಮಾವತ್ತೂರು ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಸೇರಿದಂತೆ ಇತರರು ಇದ್ದರು.

(Visited 137 times, 1 visits today)