ಕೊರಟಗೆರೆ : 

       ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಇರುವ ದೇಶ ನನ್ನ ಭಾರತ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶಕ್ಕೆ ನೀಡಿದಂತಹ ಸಂವಿಧಾನವು ವಿಶ್ವಕ್ಕೆ ಮಾದರಿ ಆಗಿದೆ. ದೇಶದ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತನಿಗೆ ನಾವೆಲ್ಲರೂ ಗೌರವಿಸೋಣ ಎಂದು ತಹಶೀಲ್ದಾರ್ ನಾಹೀದಾ ಜಮ್ ಜಮ್ ತಿಳಿಸಿದರು.

      ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೊರಟಗೆರೆ ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾದ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್‍ಗೆ ಕೊರೊನಾ ಸೊಂಕು ದೃಢಪಟ್ಟ ಹಿನ್ನಲೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಹತ್ತಿರದ ಸಂಪರ್ಕ ಇರುವಂತಹ ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿಯ ಜೊತೆ ತಪಾಸಣೆ ಮಾಡಿಸಿಕೊಳ್ಳುವಂತೆ ಈಗಾಗಲೇ ಮನವಿ ಮಾಡಿದ್ದಾರೆ.

            ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೆಸರನ್ನು ಹೇಳಲಿಲ್ಲ ಎಂದು ಆರೋಪಿಸಿ ಉದ್ಘಾಟಣಾ ಕಾರ್ಯಕ್ರಮಕ್ಕೆ ಕಾಂಗ್ರೇಸ್ ಮುಖಂಡ ಚಿಕ್ಕರಂಗಯ್ಯ ಅಡ್ಡಿಪಡಿಸಿ ಬಟ್ಟೆ ಬಿಚ್ಚಲು ಮುಂದಾಗಿದ್ದ ಘಟನೆ ನಡೆದಿದೆ. ತಹಶೀಲ್ದಾರ್ ನಾಹೀದಾಗೆ ಕಾರ್ಯಕ್ರಮ ನಿಲ್ಲಿಸಲು ಸೂಚಿಸಿದ ಚಿಕ್ಕರಂಗಯ್ಯ ನಂತರ ಸಿಪಿಐ ಸಿದ್ದರಾಮೇಶ್ವರಗೆ ಸುಮ್ಮನಿರಲು ಎಚ್ಚರಿಕೆ ಹಾಗೂ ಬಿಇಓ ಸುಧಾಕರ್‍ಗೆ ವೇದಿಕೆಯಿಂದ ಕೆಳಗೆ ಇಳಿಯುವಂತೆ ಪಟ್ಟು ಹಿಡಿದ ಘಟನೆಯ ನಂತರವು ಸಹ ಗಲಾಟೆ ತಡೆಯಲು ಮುಂದಾಯ ಕಂದಾಯ ನಿರೀಕ್ಷಕ ಪ್ರತಾಪ್‍ಗೆ ಎಳೆದು ನೊಕಾಡಿದ ಘಟನೆಯು ಸಹ ನಡೆದಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆದ ಗಲಾಟೆಯನ್ನು ನೋಡಿಕೊಂಡು ಮೌನಕ್ಕೆ ಶರಣಾದ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿವರ್ಗದ ವಿರುದ್ದ ಸಾಕಷ್ಟು ಚರ್ಚೆಗಳು ವ್ಯಕ್ತವಾಗಿವೆ.

 

 

(Visited 15 times, 1 visits today)