ಚಿಕ್ಕನಾಯಕನಹಳ್ಳಿ :
ಪಟ್ಟಣದಲ್ಲಿ ನಡೆದ 73ನೇ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿಯವರು ಗೈರು ಹಾಜರಾಗಿರುವ ಬಗೆಗಿನ ವಿವಾದದ ಬಗ್ಗೆ ಬಿಜೆಪಿ ಕಾರ್ಯಕರ್ತರು ಬುಧವಾರ ಪತ್ರಿಕಾಗೋಷ್ಠಿಯ ಮೂಲಕ ಸ್ಪಷ್ಣನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿಯ ತಾಲ್ಲೂಕು ಉಪಾಧ್ಯಕ್ಷ ನಿರಂಜನ್ ಮಾತನಾಡಿ ಸಚಿವ ಜೆ.ಸಿ. ಮಾಧುಸ್ವಾಮಿಯವರಿಗೆ ಜಿಲ್ಲೆಯ ಉಸ್ತುವಾರಿಯಿಂದ ವಿಮುಕ್ತಗೊಳಿಸಿದಾಗ, ಸಚಿವರು ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಲು ಅವಕಾಶ ನೀಡಲು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಪ್ರಸ್ತಾಪಿಸಿದ್ದರು. ಈಗಾಗಲೇ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಅಲ್ಲಿನ ತಹಸೀಲ್ದಾರ್‍ರವರರೆ ಆಡಳಿತಾತ್ಮವಾಗಿ ಧ್ವಜಾರೋಹಣ ಮಾಡುವ ನಿಯಮವಿದ್ದ ಕಾರಣ, ಪ್ರಸ್ತುತ ಸಚಿವರ ಕೋರಿಕೆಯನ್ವಯ ಚಿಕ್ಕನಾಯಕನಹಳ್ಳಿಯ ತಾಲ್ಲೂಕು ಕೇಂದ್ರದಲ್ಲಿ ಧ್ವಜಾರೋಹಣ ಮಾಡಲ ರಾಜ್ಯ ಶಿಷ್ಟಾಚಾರ ಇಲಾಖೆಗೆ ಜ. 25 ರಂದು ಪತ್ರ ರವಾನಿಸಲಾಗಿತ್ತು. ಆದರೆ ಅಲ್ಲಿಂದ ಸೂಕ್ತ ಸಂದೇಶ ಬಾರದಕಾರಣ ರಾಷ್ಟ್ರೀಯಹಬ್ಬಗಳ ಆಚರಣೆಯಲ್ಲಿ ಯಾವುದೇ ಕಾನೂನು ತೊಡಕು ನಿರ್ಮಾಣವಾಗದಿರಲೆಂದು ಸಚಿವರು ಈ ಕಾರ್ಯಕ್ರಮಕ್ಕ ಆಗಮಿಸಲಿಲ್ಲ ಎಂದರು. ಸಚಿವರಿಂದ ಸಂವಿಧಾನಕ್ಕಾಗಲಿ, ಡಾ. ಅಂಬೇಡ್ಕರ್‍ರವರ ಬಗ್ಗೆ ಯಾವುದೇ ಅಗೌರವತೋರಿಲ್ಲ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೇಶವಮೂರ್ತಿ ಮಾತನಾಡಿ ಸಚಿವರು ಕಾನೂನು ಪದವಿಪಡೆದಿದ್ದು ತಜ್ಞರಾಗಿರುವುದರಿಂದಲೇ ಯಾವುದೇ ಕಾನೂನು ಉಲ್ಲಂಘನೆಯಾಗದಿರಲೆಂದು ಗೈರಾಗಿದ್ದಾರೆ ಎಂದರು. ಮಾಜಿ ಪುರಸಭಾಧ್ಯಕ್ಷ ಸಿ.ಎಂ. ರಂಗಸ್ವಾಮಿಯವರು ಸಚಿವರಿಗೆ ಧ್ವಜಾರೋಹಣ ಮಾಡಲು ರಾಜ್ಯ ಶಿಷ್ಠಾಚಾರ ಇಲಾಖೆಗೆ ಜಿಲ್ಲಾಧಿಕಾರಿಯವರು ಬರೆದ ಪತ್ರವನ್ನು ಪ್ರದರ್ಶಿಸಿದರು.
ಮುಖಂಡ ಮಿಲಿಟರಿ ಶಿವಣ್ಣ ಮಾತನಾಡಿ ಸಚಿವರಿಂದ ಯಾವುದೇ ಲೋಪವಾಗಿಲ್ಲ, ರಾಷ್ಟ್ರೀಯ ಹಬ್ಬಗಳ ಆಚರಣಾ ಕಾರ್ಯಕ್ರಮದಲ್ಲಿ ಯಾವುದೇ ಕಾನೂನು ತೊಡಕು ಉಂಟಾಗಬರದೆಂಬ ಕಾರಣಕ್ಕೆ ಮಹತ್ವದ ತೀರ್ಮಾನ ತೆಳೆದಿದ್ದಾರೆ ಎಂದರು. ಗೋಷ್ಠಿಯಲ್ಲಿ ರಾಜಶೇಖರ್, ವಿಎಸ್‍ಎಸ್‍ಎನ್ ಅಧ್ಯಕ್ಷ ಉಮೇಶ್, ನಾಗರಾಜ್, ದೇವರಾಜ್, ಜಕಾವುಲ್ಲಾ ಮುಂತಾದವರಿದ್ದರು.