ಚಿಕ್ಕನಾಯಕನಹಳ್ಳಿ :
ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ 21 ವರ್ಷದ ಲಾವಣ್ಯ ಎಂಬ ಯುವತಿ ನೇಣುಬಿಗಿದು ಆತ್ಮಹತ್ಯೆಮಾಡಿಕೊಂಡ ಘಟನೆ ಭಾನುÀವಾರ ಮಧ್ಯಾಹ್ನ 3-30ರಲ್ಲಿ ನಡೆದಿದೆ.
ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದ ಪೊಲೀಸ್‍ಪೇದೆ ಶಶಿಧರ್‍ಕುಮಾರ್‍ರವರ ಪತ್ನಿ ಲಾವಣ್ಯ ಮನೆಯ ರೂಮಿನಲ್ಲಿನ ಫ್ಯಾನ್‍ಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದಂಪತಿಗಳಿಗೆ ಆರು ತಿಂಗಳ ಗಂಡುಮಗುವಿದ್ದು, ಶಶಿಧರ್ ರಾತ್ರಿಪಾಳಿಮುಗಿಸಿ ಮನೆಯಲ್ಲಿ ನಿದ್ರಿಸುತ್ತಿದ್ದ ಸಂದರ್ಭದಲಿ ಈಕೆ ಮಗುವನ್ನು ಮಲಗಿಸಿ ಮತ್ತೊಂದು ರೂಮಿಗೆ ತೆರಳಿ ಏಕಾಏಕಿ ಫ್ಯಾನ್‍ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಶಶಿಧರ್ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ತಪ್ಪದಕೋಣ ನಿವಾಸಿಯಾಗಿದ್ದು ಕಳೆದ ಐದುವರ್ಷದಿಂದ ಇಲ್ಲಿ ಕರ್ತವ್ಯ ನಿರ್ವಹಸುತ್ತಿದ್ದರು, ಲಾವಣ್ಯ ತಾಲುಕಿನ ಹುಳಿಯಾರು ಹೋಬಳಿ ಕಲ್ಲೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದರು. ಅನ್ಯೋನ್ಯವಾಗಿದ್ದ ಈ ದಂಪತಿಗಳ ನಡುವೆ ಅಂತಹ ಯಾವುದೇ ಮನಸ್ಥಾಪವಿರಲಿಲ್ಲ ಎಂದು ಸ್ಥಳಿಯರು ತಿಳಿಸಿದ್ದಾರೆ.
ಪ್ರಕರಣ ಸ್ಥಳೀಯ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಎಎಸ್ಪಿ ಸುಧಾಕರ್ ಗೋಯಲ್, ಸಿಪಿಐ ನಿರ್ಮಲ ಭೇಟಿನೀಡಿದ್ದರು. ಮೃತ ಯುವತಿಯ ಶವಪರೀಕ್ಷೆಯ ಸಂದರ್ಭದಲ್ಲಿ ಯುವತಿಯ ಸಂಬಂಧಿಕರ ರೋದನ ಮುಗಿಲುಮುಟ್ಟಿತ್ತು.