ಕೊರಟಗೆರೆ:

       ಗುಲಾಮಗಿರಿ ಚಿತ್ರಿಕರಕ್ಕಾಗಿ ಕೊರಟಗೆರೆ ಸುತ್ತಮುತ್ತಲಿನ ಸ್ಥಳವನ್ನು ಆಯ್ಕೆ ಮಾಡುವ ಪ್ರಯುಕ್ತ ಪಟ್ಟಣದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ನ್ಯಾಯಲಯದ ಕೆಲವು ಸನ್ನಿವೇಶಗಳನ್ನು ಚಿತ್ರಿಕರೀಸಲು ಸ್ಥಳ ವೀಕ್ಷಣೆ ಮಾಡಲು ಚಿತ್ರ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ವಿ.ಮನೋಹರ್ ಮತ್ತು ಗುಲಾಮಗಿರಿ ಚಿತ್ರತಂಡ ಶುಕ್ರವಾರ ಭೇಟಿ ನೀಡಿದರು.

       ಟೈಗರ್ ನಾಗ್‍ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗುಲಾಮಗಿರಿ ಚಿತ್ರಿಕರಣಕ್ಕಾಗಿ ಕೊರಟಗೆರೆ ಸುತ್ತಮುತ್ತಲಿನ ಸ್ಥಳವನ್ನು ಆಯ್ಕೆ ಮಾಡುವ ಪ್ರಯುಕ್ತ ಪಟ್ಟಣದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ನ್ಯಾಯಲಯದ ಕೆಲವು ಸನ್ನಿವೇಶಗಳನ್ನು ಚಿತ್ರಿಕರೀಸಲು ಸ್ಥಳ ವೀಕ್ಷಣೆ ಮಾಡಲು ಭೇಟಿ ನೀಡಿದ್ದೇವೆ ಎಂದು ಚಿತ್ರ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ವಿ.ಮನೋಹರ್ ತಿಳಿಸಿದರು.

       ಮಧುಗಿರಿಯ ಬಿ.ಎ.ಎಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಾಧಿಕ್ ಸಾಬ್ ನಿರ್ಮಿಸುತ್ತಿರುವ ‘ಗುಲಾಮಗಿರಿ ಚಿತ್ರವು’ ಕಾದಂಬರಿ ಆಧಾರಿತ ಚಿತ್ರವಾಗಿದ್ದು ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಟ-ನಟಿಯರ ಜೊತೆ ಟಾಲಿವುಡ್ ಮತ್ತು ಹಾಲಿವುಡ್ ಹಾಗೂ ತೆಲುಗು ಮತ್ತು ತಮಿಳು ನಟ-ನಟಿಯರು ಅಭಿನಯಿಸುತ್ತಿದ್ದು, ತೆಲುಗು ಮತ್ತು ತಮಿಳು ಖ್ಯಾತ ನಟ-ನಟಿಯರು ಗುಲಾಮಗಿರಿ ಚಿತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

      ಚಿತ್ರವು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ತಯಾರಾಗುತ್ತಿದ್ದು ಹೆಸರಾಂತ ಸಂಗೀತ ನಿರ್ದೇಶಕ ವಿ.ಮನೋಹರ್ ಅವರ ಮಾರ್ಗದರ್ಶನದಲ್ಲಿ ವಿಶ್ವ ಖ್ಯಾತಿಯ ಜೋಗಿ ಚಿತ್ರದ ಖ್ಯಾತಿ ಎಂ.ಆರ್ ಸೀನು ರವರ ಛಾಯಗ್ರಾಹಕದಲ್ಲಿ ಮೂಡಿ ಬರುತ್ತಿದ್ದು ಕೊರಟಗೆರೆ ಸುತ್ತ-ಮುತ್ತಲಿನ ಆಯ್ದ ತಾಣಗಳಲ್ಲಿ ಚಿತ್ರಿಕರೀಸಲು ಉದ್ದೇಶಿಸಲಾಗಿದೆ ಎಂದು ನಿರ್ದೇಶಕ ಟೈಗರ್ ನಾಗ್ ತಿಳಿಸಿದರು.

      ನಿರ್ಮಾಪಕರಾದ ಸಾಬ್ ವಿಜಯ್ ಪಾಳ್ಳೇಗಾರ್, ಸಹ ನಿರ್ದೇಶಕರಾದ ಕೆ.ಮಂಜು ಕೋಟೆಕೆರೆ, ದಿನೇಶ್ ರಾಜ್ ಇದ್ದರು.  

(Visited 100 times, 1 visits today)