ಕೊರಟಗೆರೆ :
ಗ್ರಾಹಕರಿಂದ ತೆರಿಗೆ ಪಡೆಯದೇ ವಹಿವಾಟು ಮಾಡ್ತಾರಂತೆ.. ಅದಕ್ಕಾಗಿ ಸರಕಾರಕ್ಕೆಚಿನ್ನದಅಂಗಡಿ ಮಾಲೀಕರುತೆರಿಗೆಕಟ್ಟಲ್ವಂತೆ.. ಜ್ಯೂಯಲರ್ಸ್, ಬ್ಯಾಂಕರ್ಸ್ ಹಾಗೂ ಗೋಲ್ಡ್ ಲೋನ್‍ಅಂಗಡಿಯ ಮಾಲೀಕರು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಶೇ.30ರಷ್ಟು ಮಾತ್ರ ಜಿಎಸ್‍ಟಿ ರಸೀದಿ ಕೋಡ್ತಾರಂತೆ.. ಇನ್ನೂಳಿದ ಶೇ.70ರಷ್ಟು ವಹಿವಾಟಿನ ಲೆಕ್ಕಕ್ಕೆ ನಕಲಿ ರಸೀದಿಯೇ ನೀಡ್ತಾರಂತೆ.. ತೆರಿಗೆಮುಕ್ತಆಗಿರುವಕೊರಟಗೆರೆಕ್ಷೇತ್ರದ ಬಲಿಷ್ಟ ಚಿನ್ನದ ಅಂಗಡಿಗಳ ವಹಿವಾಟಿನತನಿಖೆಗೆಆದಾಯಇಲಾಖೆಯ ಮೌನವೇಕೆಎಂಬುದೇ ಯಕ್ಷಪ್ರಶ್ನೆ.
ಕೊರಟಗೆರೆ ಪಟ್ಟಣದ ಮತ್ತುಗ್ರಾಮೀಣ ಪ್ರದೇಶದಲ್ಲಿ 30ಜ್ಯೂಯಲರ್ಸ್, ಐದಾರು ಬ್ಯಾಂಕರ್ಸ್ ಮತ್ತು ನಕಲಿ ಗೋಲ್ಡ್ ಲೋನ್ ಅಂಗಡಿಗಳಿವೆ. ಕೇಂದ್ರ ಮತ್ತುರಾಜ್ಯ ಸರಕಾರಕ್ಕೆಆದಾಯದ ಲೆಕ್ಕ ನೀಡಲು ಶೇ.30ರಷ್ಟು ಜಿಎಸ್‍ಟಿ ರಸೀದಿ ನೀಡ್ತಾರಂತೆ. ಆದಾಯ ಮರೆಮಾಚಲು ಶೇ.70ರಷ್ಟು ನಕಲಿ ರಸೀದಿ ನೀಡಿ ಸರಕಾರಕ್ಕೆತೆರಿಗೆಕಟ್ಟದೇ ವಂಚನೆ ಮಾಡ್ತಾರೇ. ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಬಂದಾಕ್ಷಣ ಅಂಗಡಿಗಳಿಗೆ ವಾರಪೂರ್ತಿರಜೆಘೋಷಣೆ ಮಾಡಿಕೇಂದ್ರ ಮತ್ತುರಾಜ್ಯ ಸರಕಾರಕ್ಕೆ ವಂಚನೆ ಮಾಡುವುದು ಸರ್ವೆ ಸಾಮಾನ್ಯವಾಗಿದೆ.
ನಕಲಿ ರಸೀದಿಯಿಂದ ಪ್ರಕರಣ ಬೆಳಕಿಗೆ..
ಕೊರಟಗೆರೆ ಪಟ್ಟಣದ ಗುಪ್ತ ಜ್ಯೂಯಲರ್ಸ್‍ನಲ್ಲಿಗೌರಿಬಿದನೂರುತಾಲೂಕಿನ ಸಾರಗುಂಡ್ಲುಗ್ರಾಮದ ಮಂಜುಳ ಎಂಬಾಕೆ 2021ನೇ ಜು.10ರಂದು 1ಲಕ್ಷ 48ಸಾವಿರ ಮೌಲ್ಯದ 30ಗ್ರಾಂ ಮಾಂಗಲ್ಯದ ಸರ ಖರೀದಿಸಿದ್ದಾರೆ. ಗುಪ್ತ ಅಂಗಡಿ ಮಾಲೀಕ ನವೀನ್‍ಗ್ರಾಹಕಿ ಮಂಜುಳ ಹೆಸರನ್ನು ಸಹ ಬರೆಯದೇ ನಕಲಿ ರಸೀದಿ ನೀಡಿದ್ದಾರೆ. 30ಗ್ರಾಂ ಬಂಗಾರದಜೊತೆಗೆ 2.7ಗ್ರಾಂ ಹೆಚ್ಚುವರಿ ವೇಷ್ಟೆಜ್ ಬಂಗಾರದ ಹಣವನ್ನು ಸಹ ಹೆಚ್ಚುವರಿಯಾಗಿ ಪಡೆದಿದ್ದಾರೆ.
ಮಂಜುಳ ಕತ್ತಿನಲ್ಲಿದ್ದ ಮಾಂಗಲ್ಯದ ಸರ ದಿನ ಕಳೆದಂತೆ ಕಪ್ಪು ಬಣ್ಣಕ್ಕೆತಿರುಗಿದೆ. ಗ್ರಾಹಕಿ ಗುಪ್ತ ನವೀನ್ ಬಳಿಗೆ ಬಂದುಚಿನ್ನದ ಸರವನ್ನು ಪರೀಕ್ಷೆ ನಡೆಸಿದಾಗ 30ಗ್ರಾಂ ಚಿನ್ನದ ಸರ 23ಗ್ರಾಂಗೆ ಇಳಿದಿದೆ. ಕಂಗಲಾದಗ್ರಾಹಕಿ ಮಾಲೀಕನ ಪ್ರಶ್ನೆ ಮಾಡಿದಾಗ ಮತ್ತೇ ಪರೀಕ್ಷಿಸಿ ಹೊಸದಾಗಿ ನೀಡುವ ಭರವಸೆ ನೀಡಿದ್ದಾರೆ. ಗ್ರಾಹಕಿಯಿಂದ ನಕಲಿ ರಸೀದಿ ಮತ್ತು ಮಾಂಗಲ್ಯದ ಸರಎರಡನ್ನು ಹಿಂದಕ್ಕೆ ಪಡೆದ ಮಾಲೀಕ ನವೀನ್ 15ದಿನ ಕಳೆದರೂ ಹಣವು ನೀಡದೇ ಬಂಗಾರವು ನೀಡದಿರುವ ಘಟನೆ ಬೆಳಕಿಗೆ ಬಂದಿದೆ.
ಜಿಎಸ್‍ಟಿ ಯಾರು ಕಟ್ಟಲ್ವಂತೆ..
ಕೊರಟಗೆರೆ ಪಟ್ಟಣದಜ್ಯೂಯಲರಿ ಮತ್ತು ಬ್ಯಾಂಕರ್ಸ್ ಮಾಲೀಕರು ಯಾರು ಸಹ ಕೇಂದ್ರ ಮತ್ತುರಾಜ್ಯ ಸರಕಾರಕ್ಕೆ ಜಿಎಸ್‍ಟಿ ತೆರಿಗೆ ಕಟ್ಟೋದಿಲ್ವಂತೆ. ಭಾರತದೇಶ ಸೇರಿದಂತೆಕೊರಟಗೆರೆಯಲ್ಲಿ ಶೇ.10ರಿಂದ 15ರಷ್ಟು ಜನ ಮಾತ್ರ ಚಿನ್ನದ ತೆರಿಗೆ ಕಟ್ತಾರಂತೆ ಅಷ್ಟೆ ಎಂಬುದು ಗುಪ್ತ ಜ್ಯೂಯಲರ್ಸ್ ಮಾಲೀಕ ನವೀನ್‍ರವರ ಮನದಾಳದ ಮಾತಾಗಿದೆ. ಹಾಗಾದರೇ ಕೊರಟಗೆರೆ ತೆರಿಗೆ ಮುಕ್ತ ಆಗಿದಿಯಾ ಅಥವಾ ಆದಾಯ ಇಲಾಖೆ ಅಧಿಕಾರಿಗಳ ವಿಫಲತೆ ಎದ್ದು ಕಾಣ್ತೀದಿಯಾ ಎಂಬುದು ತಿಳಿಯಬೇಕಿದೆ.
ಗೌಪ್ಯವಾಗಿ ಗುಪ್ತ ಗೋಲ್ಡ್ ಲೋನ್..
ಗುಪ್ತ ಜ್ಯೂಯಲರ್ಸ್ ಸಮೀಪವೇ ಗೌಪ್ಯವಾಗಿ ಗುಪ್ತ ಗೋಲ್ಡ್ ಲೋನ್ ಕೂಡ ಗ್ರಾಹಕರಿಗೆ ಲಭ್ಯವಿದೆ. ಇದಕ್ಕೆ ಯಾರ ಅಪ್ಪಣೆಯು ಬೇಕಿಲ್ವಂತೆ, ಇದನ್ನು ಪ್ರಶ್ನಿಸುವ ಅಧಿಕಾರವು ಯಾರಿಗೂ ಇಲ್ಲವೇ. ಗ್ರಾಹಕರು ಬಂಗಾರ ಖರೀದಿಸುವಾಗ ನಕಲಿ ರಸೀದಿ ನೀಡುತ್ತೀರುವ ಇವರು ಇನ್ನೂಗೋಲ್ಡ್ ಲೋನ್ ವ್ಯವಹಾರ ಹೇಗೆ ಮಾಡ್ತಾರೇ. ಗ್ರಾಹಕರಿಂದ ಪಡೆಯುವ ಬಡ್ಡಿ ಎಷ್ಟು, ಬಂಗಾರ ಹೇಗೆ ಕೋಡ್ತಾರೇ ಎಂಬುದು ತನಿಖೆಯಿಂದ ಬಯಲಿಗೆ ಬರಬೇಕಿದೆ.
ಕೋಟ್ ಬಳಸಿ ಸಾರ್..
ಗುಪ್ತ ಜ್ಯೂಯಲರ್ಸ್‍ನಲ್ಲಿ 30ಗ್ರಾಂ ಚಿನ್ನದ ಸರಕ್ಕೆ 1ಲಕ್ಷ 48 ಸಾವಿರ ಹಣ ನೀಡಿದ್ದೇನೆ. ನಮಗೆ ಅಂಗಡಿ ಮಾಲೀಕ ನವೀನ್‍ಜಿಎಸ್‍ಟಿ ರಸೀದಿ ನೀಡದೇ ನಕಲಿ ರಸೀದಿಯ ಜೊತೆ ಕೆಡಿಎಂ ಚಿನ್ನದ ಬದಲು ನಕಲಿ ಬಂಗಾರ ನೀಡಿದ್ದಾರೆ. 30ಗ್ರಾಂ ಇದ್ದ ಮಾಂಗಲ್ಯ ಸರ ಈಗ ಕಪ್ಪು ಬಣ್ಣಕ್ಕೆ ತಿರುಗಿ 23ಗ್ರಾಂ ಆಗಿದೆ. ನಾವು ಪ್ರಶ್ನಿಸಿದ್ದಕ್ಕೆ ಸರ ಮತ್ತು ರಸೀದಿ ಪಡೆದು ನಾಳೆ ಬನ್ನಿ ನಾಡಿದ್ದು ಬನ್ನಿ ಅಂತಾರೇ. ಮಂಜುಳ. ಗ್ರಾಹಕಿ. ಗೌರಿಬಿದನೂರು
ನನ್ನ ಮಗಳಿಗೆ ಮಾಂಗಲ್ಯ ಸರ ನೀಡುವಾಗಲೇ ಮೋಸವಾಗಿದೆ. ಗುಪ್ತ ಅಂಗಡಿ ಮಾಲೀಕಅಧಿಕೃತ ರಸೀದಿಯು ಕೊಟ್ಟಿಲ್ಲ, ಕೆಡಿಎಂ ಬಂಗಾರವು ನೀಡಿಲ್ಲ. ನಮ್ಮ ಕಡೆಯಿಂದ ಚಿನ್ನದ ಸರ ಹಿಂದಕ್ಕೆ ಪಡೆದು 15ದಿನ ಕಳೆದಿವೆ. ಇತ್ತ ಹಣವುಇಲ್ಲ ಬಂಗಾರವುಇಲ್ಲದೇ ಪರದಾಡುವ ಪರಿಸ್ಥಿತಿ ಇದೆ. ದಯವಿಟ್ಟು ನಮಗೆ ನ್ಯಾಯ ಕೋಡಿಸಿ.
ಹನುಮಂತರಾಯಪ್ಪ.
ಗ್ರಾಹಕಿಯತಂದೆ. ಕೊರಟಗೆರೆ
ಚಿನ್ನ ಖರೀದಿಸುವ ಗ್ರಾಹಕರು ನಮಗೆ ಜಿಎಸ್‍ಟಿ ತೆರಿಗೆ ಕಟ್ಟೋಲ್ಲ. ಅದಕ್ಕೆ ನಾನು ಸಹ ಸರಕಾರಕ್ಕೆ ಜಿಎಸ್‍ಟಿ ತೆರಿಗೆ ಕಟ್ಟೋದಿಲ್ಲ. 30 ಗ್ರಾಂ ಚಿನ್ನದ ಸರಕ್ಕೆ ಮಂಜುಳರಿಂದ 1ಲಕ್ಷ 48 ಸಾವಿರ ಪಡೆದಿದ್ದೇನೆ. ನಾನು ಗ್ರಾಹಕರಿಗೆ ನೀಡಿರುವ ರಸೀದಿಯಲ್ಲಿ ಹೆಸರು ಹಾಕಿಲ್ಲ. ಅದು ಸಹ ನಿಜ. ಕೊರಟಗೆರೆ ಸೇರಿದಂತೆ ಭಾರತದೇಶದಲ್ಲಿ ಶೇ.15ರಷ್ಟು ಜನ ಮಾತ್ರಜಿಎಸ್‍ಟಿತೆರಿಗೆಕಟ್ಟುತ್ತಾರೆಅದುಎಲ್ಲರಿಗೂ ತಿಳಿದಿರುವ ವಿಚಾರ.
ನವೀನ್. ಮಾಲೀಕ. ಗುಪ್ತ ಜ್ಯುಯಲರ್ಸ್. ಕೊರಟಗೆರೆ